ತಾಲ್ಲೂಕು ಕಚೇರಿಗಳಿಗೆ ಕೊಡಗು ಜಿಲ್ಲಾಧಿಕಾರಿ ಭೇಟಿ
February 18, 2021

ಮಡಿಕೇರಿ ಫೆ.18 : ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಪ್ರಥಮ ಬಾರಿಗೆ ವಿರಾಜಪೇಟೆ ತಾಲ್ಲೂಕು ಮತ್ತು ಮಡಿಕೇರಿ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಹಶೀಲ್ದಾರರು ಮತ್ತು ಕಂದಾಯ ಪರಿವೀಕ್ಷಕರೊಂದಿಗೆ ಕಂದಾಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ವಿರಾಜಪೇಟೆ ತಾಲ್ಲೂಕು ಕಚೇರಿ ಪರಿಶೀಲನೆಯ ನಂತರ ಜಿಲ್ಲಾಧಿಕಾರಿ ಅವರು ವಿರಾಜಪೇಟೆ ಪಟ್ಟಣ ಪಂಚಾಯತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಮತ್ತು ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ತದನಂತರ ಕಳೆದ ಸಾಲಿನ ಮಳೆಗಾಲದಲ್ಲಿ ಬಿರುಕು ಬಿಟ್ಟಿದ್ದ ವಿರಾಜಪೇಟೆಯ ನಗರದ ಅಯ್ಯಪ್ಪ ಬೆಟ್ಟಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ವಿರಾಜಪೇಟೆಯಲ್ಲಿ ಪರಿಶೀಲನೆ ಸಂದರ್ಭ ತಹಶೀಲ್ದಾರ್ ಯೋಗಾನಂದ, ಮುಖ್ಯಾಧಿಕಾರಿ, ಶ್ರೀಧರ್ ಮತ್ತು ಕಂದಾಯಾಧಿಕಾರಿಗಳು ಹಾಜರಿದ್ದರು.
ಮಡಿಕೇರಿ ತಾಲ್ಲೂಕು ಕಚೇರಿ ಪರಿಶೀಲನೆ ಸಂದರ್ಭ ತಹಶೀಲ್ದಾರ್ ಮಹೇಶ್ ಮತ್ತು ಕಂದಾಯಾಧಿಕಾರಿಗಳು ಹಾಜರಿದ್ದರು.