ಸೋಮವಾರಪೇಟೆಯಲ್ಲಿ ಕ್ರಿಕೆಟ್ ಪಂದ್ಯಾವಳಿ : ತಾಕೇರಿ ಟೀಂ ಸ್ಮ್ಯಾಚರ್ಸ್ ತಂಡ ಪ್ರಥಮ

ಸೋಮವಾರಪೇಟೆ ಫೆ.18 : ಕಲ್ಕಂದೂರು ಟೀಮ್ 96 ವತಿಯಿಂದ ಇಲ್ಲಿನ ಬಿಟಿಸಿಜಿ ಕಾಲೇಜು ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ತಾಕೇರಿ ಟೀಂ ಸ್ಮ್ಯಾಚರ್ಸ್ ತಂಡ ಪ್ರಥಮ ಹಾಗೂ ಎಬಿಡಿ ಸೋಮವಾರಪೇಟೆ ತಂಡ ದ್ವಿತೀಯ ಸ್ಥಾನ ಗಳಿಸಿದವು. ಪಂದ್ಯಾವಳಿಯ ತೃತೀಯ ಸ್ಥಾನವನ್ನು ಹಾನಗಲ್ ಬ್ರದರ್ಸ್ ತಂಡ ಪಡೆಯಿತು.
ಭಾನುವಾರ ಸಂಜೆ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಾನಗಲ್ಲು ಗ್ರಾ.ಪಂ. ಉಪಾಧ್ಯಕ್ಷ ಎಚ್.ವಿ.ಮಿಥುನ್, ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದ್ದು, ಸ್ಪರ್ಧಾ ಮನೋಭಾವನೆಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟೀಂ 96ನ ಅಧ್ಯಕ್ಷ ಕೆ.ಯು. ಇಬ್ರಾಹಿಂ ವಹಿಸಿದ್ದರು. ವೇದಿಕೆಯಲ್ಲಿ ಗುತ್ತಿಗೆದಾರ ಗೋವಿಂದ, ಗ್ರಾ.ಪಂ. ಸದಸ್ಯರಾದ ಪ್ರಕಾಶ್, ಬೆನಕ ಬಿಲ್ಡರ್ಸ್ನ ರತನ್ ಮಹೇಶ್, ಲೆಕ್ಕ ಪರಿಶೋಧಕ ನಾಪಂಡ ಬಿಪಿನ್, ಹಿರಿಯ ಕ್ರಿಕೆಟ್ ಆಟಗಾರ ಕೆ.ಎನ್. ನಾಗರಾಜು, ಮಾಜಿ ಸೈನಿಕ ಇಸ್ಮಾಯಿಲ್, ಇದ್ದರು. ಅತಿಥಿಗಳು ಬಹುಮಾನ ವಿತರಿಸಿದರು. ಇದಕ್ಕೂ ಮುನ್ನ ಪುಲ್ವಾಮಾ ಧಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಆತ್ಮಕ್ಕೆ ಶ್ರದ್ಧಾಂಜಲಿ ಕೋರಿ ಮೌನಾಚರಿಸಲಾಯಿತು.
ಟೀಂ 96ನ ಮಹಮ್ಮದ್ ಸಲಾಂ, ಅಜೀಜ್, ಅದ್ರಾಮ ಸೇರಿದಂತೆ ಪದಾಧಿಕಾರಿಗಳು ಕಾರ್ಯಕ್ರಮ ನಿರ್ವಹಿಸಿದರು.