ಸುರಿದದ್ದು ಮಳೆಯಲ್ಲ ರಾಶಿ ರಾಶಿ ಆಲಿಕಲ್ಲು : ಶನಿವಾರಸಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕ

February 19, 2021

ಮಡಿಕೇರಿ ಫೆ.19 : ಜನವರಿ ಮೊದಲ ವಾರದಲ್ಲಿ ಸುರಿದ ಅಕಾಲಿಕ ಮಳೆಯ ಕಷ್ಟ, ನಷ್ಟಗಳಿಂದ ಚೇತರಿಸಿಕೊಳ್ಳುವ ಮೊದಲೇ ಶನಿವಾರಸಂತೆ ಭಾಗದ ಗ್ರಾಮಸ್ಥರು ಹಾಗೂ ರೈತರಿಗೆ ಇಂದು ಸುರಿದ ಆಲಿಕಲ್ಲಿನ ಮಹಾಮಳೆ ಆಘಾತವನ್ನುಂಟು ಮಾಡಿದೆ.
ರಥಸಪ್ತಮಿಯ ದಿನವಾದ ಇಂದು ತಿಳಿ ಮೋಡದ ವಾತಾವರಣದ ನಡುವೆ ದಿಢೀರ್ ಆಗಿ ಮಳೆ ಸುರಿದಿದೆ. ಬರೀಯ ಮಳೆಯಾಗಿದ್ದರೆ ಸಮಾಧಾನ ಪಡಬಹುದಿತ್ತು, ಆದರೆ ಸುರಿದದ್ದು ರಾಶಿ ರಾಶಿ ಆಲಿಕಲ್ಲು. ಈ ಅನಿರೀಕ್ಷಿತ ಬೆಳವಣಿಗೆಯಿಂದ ಗ್ರಾಮಸ್ಥರು ಹೊರ ಬಂದು ನೋಡಿದಾಗ ಸುತ್ತಮುತ್ತಲ ಪರಿಸರ, ಮನೆಗಳ ಮೇಲ್ಚಾವಣಿ ಆಲಿಕಲ್ಲಿನ ರಾಶಿಯಿಂದ ತುಂಬಿ ಹೋಗಿರುವುದು ಕಂಡು ಬಂತು. ಅಲ್ಲದೆ ಈ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ಹಸಿ ಮೆಣಸಿನ ಫಸಲು ಆಲಿಕಲ್ಲಿನ ಹೊಡೆತಕ್ಕೆ ಸಂಪೂರ್ಣವಾಗಿ ನಾಶವಾಗಿದೆ.
ಪ್ರಕೃತಿಯ ಈ ವಿಸ್ಮಯದಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಮೂಡಿದ್ದು, ರೈತರು ನಷ್ಟದಿಂದ ದು:ಖ ಪಡುತ್ತಿದ್ದಾರೆ. ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಕೊಡಗಿನ ವಿವಿಧೆಡೆ ಮೋಡ ಕವಿದ ವಾತಾವರಣ ಮುಂದುವರೆದಿದೆ.

error: Content is protected !!