ಸುಂಟಿಕೊಪ್ಪಕ್ಕೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭೇಟಿ

February 19, 2021

ಸುಂಟಿಕೊಪ್ಪ,ಫೆ.19: ಮಾನವಕುಲ ಸುಖ ಶಾಂತಿ ನೆಮ್ಮದಿಗೆ ಹಾತೊರೆಯುತ್ತಿದ್ದು, ಆಧ್ಯಾತ್ಮಿಕ ನೆಲೆಗÀಟ್ಟನ್ನು ಯುವಪೀಳಿಗೆ ಬೆಳೆಸಿಕೊಳ್ಳುವ ಅಗತ್ಯತೆ ಇದೆ ಎಂದು ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಸುಂಟಿಕೊಪ್ಪ ಗುಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಬಿಲ್ಲವ ಜನಾಂಗದ ದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಕನ್ಯಾಡಿ ನಿತ್ಯಾನಂದ ನಗರ ಸ್ವಾಮಿಜಿ, ಶ್ರೀ ರಾಮ ಕನ್ಯಾಡಿ ಕ್ಷೇತ್ರ ಮಹಾಸಂಸ್ಥಾಪನ ಮಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಭೇಟಿ ನೀಡಿ ಆರ್ಶಿವಚನ ನೀಡಿದರು.
ಧರ್ಮ ನಾಶವಾದರೆ ಮಾನವಕುಲ ನಾಶವಾದಂತೆ. ಧರ್ಮದ ನೆಲೆಯಲ್ಲಿ ಪ್ರತಿಯೊಬ್ಬರು ಸತ್ಯನ್ಯಾಯ ನೀತಿಯಿಂದ ಬದುಕಬೇಕು. ದೇವರ ಸ್ಮರಣೆಯಿಂದ ಮಾನಸಿಕ ಶಾಂತಿ ಸಿಗಲಿದೆ ಎಂದು ಹೇಳಿದರು.
ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ಮಠದ ಸಂಚಾಲಕ ಕೃಷ್ಣಪ್ಪ ಪೂಜಾರಿ, ನಿವೃತ್ತ ಡಿವೈಎಸ್‍ಪಿ ಕೊಡಗು ಜಿಲ್ಲಾ ಸಂಚಾಲಕ ಲಿಂಗಪ್ಪ ಪೂಜಾರಿ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಿಲ್ಲವ ಜನಾಂಗದವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಗಳಿಸಿ ಅಧ್ಯಕ್ಷ, ಉಪಾಧ್ಯಕ್ಷರು ಸದಸ್ಯರುಗಳಿಗೆ ಸ್ವಾಮೀಜಿಗಳು ಪುಷ್ಪಾಗುಚ್ಚ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಣಿ ಮುಖೇಶ್, ಉಪಾಧ್ಯಕ್ಷರುಗಳಾದ ಗೀತಾ ವಿಶ್ವನಾಥ್, ನಾಗೇಶ ಪೂಜಾರಿ, ಖಜಾಂಜಿ ಚಂದ್ರು, ಸಾಂಸ್ಕøತಿಕ ಕಾರ್ಯದರ್ಶಿ ಪುರುಶೋತ್ತಮ್, ಸಲಹ ಸಮಿತಿ ಯಶೋಧರ ಪೂಜಾರಿ, ಕೆ.ಪಿ.ಜಗನ್ನಾಥ, ಜಿನ್ನಪ್ಪ ಪೂಜಾರಿ, ನಾಗಪ್ಪ, ಹಾಗೂ ದೇಯಿಬೈದೇದಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಮಧುನಾಗಪ್ಪ ಮತ್ತಿತರರು ಇದ್ದರು.

error: Content is protected !!