ಸೋಮವಾರಪೇಟೆಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ

February 19, 2021

ಮಡಿಕೇರಿ ಫೆ. 19 : ಸೋಮವಾರಪೇಟೆಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಗಳ ಮೇಲೆ ಅಧಿಕಾರಿಗಳು ಹಾಗೂ ಪ.ಪಂ ಸದಸ್ಯರು ದಾಳಿ ನಡೆಸಿ, ಅಂಗಡಿಗಳ ಮಾಲಿಕರಿಗೆ ದಂಡ ವಿಧಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಳಿನಿ ಗಣೇಶ್ ಅವರ ನೇತೃತ್ವದಲ್ಲಿ ಸದಸ್ಯರಾದ ಪಿ.ಕೆ. ಚಂದ್ರು, ಮಹೇಶ್, ಜೀವನ್, ಆರೋಗ್ಯಾಧಿಕಾರಿ ಉದಯಕುಮಾರ್ ಅವರುಗಳ ತಂಡ ಪಟ್ಟಣದ ಅಂಗಡಿಗಳಿಗೆ ತೆರಳಿ ಪ್ಲಾಸ್ಟಿಕ್‍ಗಳ ದಾಸ್ತಾನನ್ನು ಪರಿಶೀಲಿಸಿ, ಪ್ಲಾಸ್ಟಿಕ್ ಬಳಸುತ್ತಿದ್ದ ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆಯೊಂದಿಗೆ ದಂಡ ವಿಧಿಸಿದರು.

error: Content is protected !!