ತನಲ್ ಮಾತೃ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಎಂ.ಹೆಚ್. ಮೊಹಮ್ಮದ್ ಆಯ್ಕೆ

February 19, 2021

ಮಡಿಕೇರಿ ಫೆ. 19 : ನಗರದ ತ್ಯಾಗರಾಜ ಕಾಲೋನಿಯಲ್ಲಿರುವ ತನಲ್ ವೃದ್ಧಾಶ್ರಮದಲ್ಲಿ ಪುರುಷ ವಸತಿ ಗೃಹದ ಉದ್ಘಾಟನೆ ಮತ್ತು ಸಮಿತಿಯ ವಾರ್ಷಿಕ ಸಭೆ ನಡೆಯಿತು.
ತನಲ್ ಮಾತೃ ಸಂಸ್ಥೆಯ ಕಾರ್ಯದರ್ಶಿ ಮನ್ಸೂರ್ ಅವರ ಅಧ್ಯಕ್ಷತೆಯಲ್ಲಿ 2021 ನೇ ವರ್ಷದ ನೂತನ ಸಮಿತಿಯನ್ನು ರಚಿಸಲಾಯಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ಎಂ.ಹೆಚ್. ಮೊಹಮ್ಮದ್, ಉಪಾಧ್ಯಕ್ಷರಾಗಿ ಹೆಚ್.ಆರ್. ವಿನು ಮತ್ತು ಟಿ.ಆರ್. ರಾಘವೇಂದ್ರ (ರಘು), ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಕೆ.ಎನ್. ಪೀಟರ್. ಜಂಟಿ ಕಾರ್ಯದರ್ಶಿಗಳಾಗಿ ಬಾಬುಚಂದ್ರ ಉಳ್ಳಾಗಡ್ಡಿ, ಎಂ.ಎಂ. ಅಬ್ದುಲ್ಲಾ, ಖಜಾಂಚಿಗಳಾಗಿ ಬೇಬಿ ಮ್ಯಾಥ್ಯೂ ಹಾಗೂ ಸದಸ್ಯರುಗಳಾಗಿ ಎಂ.ಹೆಚ್ ರಶೀದ್, ಎಂ.ಎ. ಫಯಾಜ್, ಎಂ.ಎಂ. ಕರಾಮತ್ತುಲ್ಲ, ಚಂದನ್ ನಂದರಬೆಟ್ಟು, ಪಿ.ಯು. ವಿನು, ಎಂ.ಯು. ಇಮ್ರಾನ್ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭ ಇಲ್ಲಿಯಾಸ್, ಮಜ಼ಾಯಿರ್ ಮತ್ತಿರರು ಹಾಜರಿದ್ದರು.

error: Content is protected !!