ಗಾಂಧಿ ಮೈದಾನದಿಂದ ಮಳಿಗೆ ತೆರವಿಗೆ ಜೆಡಿಎಸ್ ಮಹಿಳಾ ಘಟಕ ಒತ್ತಾಯ

February 19, 2021

ಮಡಿಕೇರಿ ಫೆ.19 : ನಗರದಲ್ಲಿರುವ ಗಾಂಧಿ ಮಂಟಪದ ಎದುರು ಕಾವೇರಿ ವಸ್ತ್ರಸಿರಿ ಉತ್ಪನ್ನಗಳ ಮಾರಾಟ ಮಳಿಗೆಗೆ ಅವಕಾಶ ನೀಡಿರುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ಜಾತ್ಯತೀತ ಜನತಾದಳದ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾಶೇಷಮ್ಮ, ಗಾಂಧಿ ಪ್ರತಿಮೆಯನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ಮಳಿಗೆಯನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ್ದ ಅವರು ಕೇವಲ ಆದಾಯ ಗಳಿಸುವ ಉದ್ದೇಶದಿಂದ ನಗರಸಭೆ ಗಾಂಧಿ ಮಂಟಪದ ಬಳಿ ಮಳಿಗೆಗೆ ಅವಕಾಶ ನೀಡಿರುವುದು ಖಂಡನೀಯ, ಇದು ಮಹಾತ್ಮ ಗಾಂಧಿಗೆ ಮಾಡಿರುವ ಅವಮಾನ ಎಂದು ಆರೋಪಿಸಿದ್ದಾರೆ.
ಜಿಲ್ಲಾಡಳಿತ ಮತ್ತು ನಗರಸಭೆ ತಕ್ಷಣ ಎಚ್ಚೆತ್ತುಕೊಂಡು ಮಾರಾಟ ಮಳಿಗೆ, ಕಾರ್ಮಿಕರ ಟೆಂಟ್ ಹಾಗೂ ಮಣ್ಣಿನ ರಾಶಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಲೀಲಾಶೇಷಮ್ಮ ಆಗ್ರಹಿಸಿದ್ದಾರೆ.

error: Content is protected !!