ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೂರ್ಗ್ ಬೋರ್ ವೆಲ್ ಅಸೋಸಿಯೇಷನ್ ಪ್ರತಿಭಟನೆ

February 19, 2021

ಕುಶಾಲನಗರ ಫೆ.19 : ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೂರ್ಗ್ ಬೋರ್ ವೆಲ್ ಅಸೋಸಿಯೇಷನ್ ವತಿಯಿಂದ ಕುಶಾಲನಗರ ಸಮೀಪದ ಕೊಪ್ಪದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಕೂರ್ಗ್ ಬೋರ್ ವೆಲ್ ಅಸೋಸಿಯೇಷನ್ ಉಪಾಧ್ಯಕ್ಷ ಎಂ.ಮಂಜುನಾಥ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ‌ ಸಂದರ್ಭ ಮಾತನಾಡಿದ ಕೂರ್ಗ್ ಬೋರ್ ವೆಲ್ ಅಸೋಸಿಯೇಷನ್ ಉಪಾಧ್ಯಕ್ಷ ಎಂ.ಮಂಜುನಾಥ್, ಇಂದು ಡೀಸೆಲ್ ಬೆಲೆ ಏರಿಕೆಯಿಂದ ಜನಜೀವನ ತತ್ತರವಾಗಿದೆ. ನಮ್ಮ ದುಡಿಮೆಯನ್ನು ಸಂಪೂರ್ಣವಾಗಿ ಡೀಸೆಲ್ ಗೆ ನೀಡಬೇಕಾಗಿದೆ‌. ಅಲ್ಲದೇ ಬೋರ್ ವೆಲ್ ನ ಬಿಡಿ ಭಾಗಗಳು ಬೆಲೆ ಕೂಡಾ ಹೆಚ್ಚಾಗಿದ್ದು, ಬೋರ್ ವೆಲ್ ಕೊರೆಯಿಸಲು ಸಾರ್ವಜನಿಕರು ಮುಂದಾಗುತ್ತಿಲ್ಲ. ಕೂಡಲೇ ಸರ್ಕಾರ ಡೀಸೆಲ್ ಬೆಲೆ ಇಳಿಸಬೇಕು.ಇಲ್ಲದಿದ್ದಲ್ಲಿ  ಕೂರ್ಗ್ ಬೋರ್ ವೆಲ್ ಅಸೋಸಿಯೇಷನ್ ವತಿಯಿಂದ ನಿರಂತರ ಹೋರಾಟ ಪ್ರತಿಭಟನೆ ನಡೆಸಲಾಗುವುದು ಎಂದರು. ಈ ಸಂದರ್ಭ ಕೂರ್ಗ್ ಬೋರ್ ವೆಲ್ ಅಸೋಸಿಯೇಷನ್ ಅಧ್ಯಕ್ಷ ನಿರಂಜನ್, ಪದಾಧಿಕಾರಿಗಳಾದ ಸಂತೋಷ್, ಸ್ವಾಮಿನಾದನ್, ಮಂಜುನಾಥ್, ದೀಪಕ್, ಅನಿಲ್, ಪ್ರವೀಣ್ ಹಾಗೂ  ಐವತ್ತಕ್ಕೂ ಹೆಚ್ಚು ಬೋರ್ ವೆಲ್ ಕಾರ್ಮಿಕರು ಇದ್ದರು.

error: Content is protected !!