ರಥಸಪ್ತಮಿ ಪ್ರಯುಕ್ತ ಸೋಮವಾರಪೇಟೆಯಲ್ಲಿ 108 ಸೂರ್ಯ ನಮಸ್ಕಾರ

February 19, 2021

ಸೋಮವಾರಪೇಟೆ ಫೆ.19 : ರಥಸಪ್ತಮಿ ಪ್ರಯುಕ್ತ ನಿರಂತರ ಯೋಗ ತರಬೇತಿ ಕೇಂದ್ರದ ವತಿಯಿಂದ ಜೂನಿಯರ್ ಕಾಲೇಜು ಆವರಣದಲ್ಲಿ ಶುಕ್ರವಾರ 108 ಸೂರ್ಯ ನಮಸ್ಕಾರ ಮಾಡಲಾಯಿತು.
ಯೋಗ ಶಿಕ್ಷಕ ಗಣೇಶ್ ಮಾತನಾಡಿ, ಸೂರ್ಯನ ಪಥ ಬದಲಿಸುವ ದಿನವನ್ನು ರಥಸಪ್ತಮಿ ಎಂದು ಅನೇಕ ಶತಮಾನಗಳಿಂದ ಹಿಂದುಗಳು ಆಚರಿಸುತ್ತಾರೆ. ಇಂದು ಸೂರ್ಯನು ಪ್ರಕಾಶಮಾನವಾಗಿ ಬೆಳಗುವ ದಿನವಾಗಿದೆ. ಸೂರ್ಯ ಮತ್ತು ಮನುಷ್ಯರಿಗೆ ಅವಿನಾಭಾವ ಸಂಬಂಧ ಇದ್ದು, ರಥಸಪ್ತಮಿಯಂದು ಬೆಳಿಗ್ಗೆ ಬೇಗ ಎದ್ದು, 108 ಸೂರ್ಯ ನಮಸ್ಕಾರ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದರು.
ಸೂರ್ಯ ನಮಸ್ಕಾರದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ರಾಮಶೆಟ್ಟಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಚಂದ್ರಕಲಾ, ವಕೀಲ ಗಿರೀಶ್, ಇಂಜಿನಿಯರ್ ನಾಗರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

error: Content is protected !!