ಕೊಡಗು ಜಿಲ್ಲಾ ಮಟ್ಟದ ಸರ್ ಸಿ.ವಿ.ರಾಮನ್ ವಿಜ್ಞಾನ ರಸ ಪ್ರಶ್ನೆ ಸ್ಪರ್ಧಾ ವಿಜೇತರ ವಿವರ

February 19, 2021

ಮಡಿಕೇರಿ ಫೆ.19 : ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಸರ್ ಸಿ.ವಿ.ರಾಮನ್ ವಿಜ್ಞಾನ ರಸ ಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ಆನ್‌ಲೈನ್ ಮೂಲಕ ನಡೆಯಿತು. ವಿಜೇತರ ವಿವರ ಹೀಗಿದೆ.

ಪ್ರಥಮ ಬಹುಮಾನ ವರ್ಷಿತಾ ಬಿ ದಿನೇಶ್, 9ನೇ ತರಗತಿ, ಜ್ಞಾನಗಂಗಾ ವಸತಿ ಶಾಲೆ, ಅತ್ತೂರು, ಕುಶಾಲನಗರ,

ದ್ವಿತೀಯ ಬಹುಮಾನ ತಾನ್ವಿ ಸಿ ಯು, 8ನೇ ತರಗತಿ, ಸಂತ ಜೋಸೆಫರ ಪ್ರೌಢಶಾಲೆ, ಸೋಮವಾರಪೇಟೆ.

ತೃತೀಯ ಬಹುಮಾನ  ಸನ್ಮತಿ, 9ನೇ ತರಗತಿ, ಸಂತ ಮೈಕಲರ ಪ್ರೌಢಶಾಲೆ, ಮಡಿಕೇರಿ,

ಈ ವಿಜೇತರಲ್ಲಿ ಮೊದಲ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ದಿನಾಂಕ 21/02/2021 ರಂದು ನಡೆಯುವ ರಾಜ್ಯ ಮಟ್ಟದ ರಸ ಪ್ರಶ್ನೆ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಸಂಯೋಜಕರಾದ ವಿಲ್ಫ್ರೆಡ್ ಕ್ರಾಸ್ತ ತಿಳಿಸಿದ್ದಾರೆ.

error: Content is protected !!