ಫೆ.27 ರಂದು ಮಡಿಕೇರಿಯಲ್ಲಿ ಪ್ರೌಢಶಾಲಾ ಮಕ್ಕಳಿಗೆ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ

February 20, 2021

ಮಡಿಕೇರಿ ಫೆ.20 : ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಫೆ.27 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವನ್ನು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ಮೊದಲು ಲಿಖಿತ ಪರೀಕ್ಷೆ ನಂತರ ಮೌಖಿಕ ಪರೀಕ್ಷೆ ನಡೆಸಲಾಗುವುದು. ಸ್ಪರ್ಧೆಯಲ್ಲಿ ವಿಜೇತಗೊಂಡ ಮೊದಲ ಎರಡು ತಂಡಗಳಿಗೆ ಕ್ರಮವಾಗಿ ರೂ.3 ಸಾವಿರ ಹಾಗೂ ರೂ.2 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ಸ್ಪರ್ಧಾ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಸಿ.ಎಸ್.ಸುರೇಶ್ ಅವರು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಶನ ಪಡೆದ ತಂಡವು ನಂತರ ಬೆಂಗಳೂರಿನಲ್ಲಿ ಚಂದನ ವಾಹಿನಿಯಲ್ಲಿ “ಥಟ್ ಅಂತ ಹೇಳಿ” ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ತಂಡದ ನೋಂದಣಿ: ಸ್ಪರ್ಧೆಗೆ ಭಾಗವಹಿಸುವ ಪ್ರೌಢಶಾಲಾ ತಂಡವನ್ನು ಫೆ.23 ರೊಳಗಾಗಿ(ಆನ್‍ಲೈನ್ ನೋಂದಣಿ) ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗೆ ಸಿ.ಎಸ್.ಸುರೇಶ್, ಕ್ವಿಜ್ ಮಾಸ್ಟರ್, ಮತ್ತು ಶಿಕ್ಷಕರು, ನೇತಾಜಿ ಪ್ರೌಢಶಾಲೆ, ಬಲ್ಲಮಾವಟಿ (ಮೊಬೈಲ್ : 99003 70842) ಅವರನ್ನು ಸಂಪರ್ಕಿಸಲು ಪ್ರೌಢಶಾಲಾ ಮುಖ್ಯೋಪಾಧ್ಯಾಯರು / ಮಾರ್ಗದರ್ಶಿ ಶಿಕ್ಷಕರಿಗೆ ತಿಳಿಸಿದೆ.
ಸ್ಪರ್ಧೆ ದಿನದಂದು ತಮ್ಮ ಶಾಲಾ ಮಕ್ಕಳ ತಂಡದೊಂದಿಗೆ ಮಾರ್ಗದರ್ಶಿ ಶಿಕ್ಷಕರು ಜತೆಯಲ್ಲಿ ಆಗಮಿಸಲು ತಿಳಿಸಿದೆ. ಮಾಹಿತಿಗಾಗಿ ಕಾರ್ಯಕ್ರಮ ಸಂಘಟಕರಾದ ಎಸ್.ಟಿ.ವೆಂಕಟೇಶ್ ನೋಡಲ್ ಅಧಿಕಾರಿ, ಡಿಡಿಪಿಐ ಕಚೇರಿ, ಮಡಿಕೇರಿ, ಮೊ: 94488 73999)/ ಟಿ.ಜಿ.ಪ್ರೇಮಕುಮಾರ್, ಕಾರ್ಯದರ್ಶಿ, ಕ.ರಾ.ವಿ.ಪ.ಕೊಡಗು ಜಿಲ್ಲೆ (ಮೊ: 94485 88352) ಅವರನ್ನು ಸಂಪರ್ಕಿಸಲು ತಿಳಿಸಿದೆ. (ಒಂದು ಶಾಲೆಯಿಂದ 9 ಮತ್ತು 10 ನೇ ತರಗತಿಯಿಂದ ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡ ಒಂದು ತಂಡ ಮಾತ್ರ ಭಾಗವಹಿಸಬಹುದು).

error: Content is protected !!