ಸೋಮವಾರಪೇಟೆ : ಆನೆ ದಂತ, ಜಿಂಕೆ ಕೊಂಬು ಮಾರಾಟ ಯತ್ನ : ಓರ್ವನ ಬಂಧನ

February 20, 2021

ಮಡಿಕೇರಿ ಫೆ.20 : ಆನೆ ದಂತ ಹಾಗೂ ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಸೋಮವಾರಪೇಟೆ ಪೋಲಿಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಅರಕಲಗೂಡು ತಾಲೂಕಿನ ಬೆಟ್ಟಗಳಲೆ ಗ್ರಾಮದ ನಿವಾಸಿ ಕೃಷ್ಣಗೌಡರ ಪುತ್ರ ಪ್ರಸನ್ನ ಬಂಧಿತ ಆರೋಪಿಯಾಗಿದ್ದು, ಪರಾರಿಯಾದ ಇನ್ನೋರ್ವ ಆರೋಪಿ ಅದೇ ಗ್ರಾಮದ ಪುಲಿಕೇಶಿ ಅವರ ಪುತ್ರ ಗಿರೀಶ್ ಬಂಧನಕ್ಕೆ ಪೋಲಿಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಹೆಬ್ಬಾಲೆ ಸಮೀಪದ ಬಾಣಾವರದ ಬಳಿ ಜಿಂಕೆ ಕೊಂಬು ಮತ್ತು ಆನೆ ದಂತವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಖಚಿತವಾದ ಮಾಹಿತಿ ಮೇರೆಗೆ ಅಧಿಕಾರಿಗಳು ಕಾರ್ಯಚರಣೆ ನಡೆಸಿದರು.
ಬಂಧಿತ ಆರೋಪಿಯಿಂದ ಒಂದು ಆನೆ ದಂತ, ಜಿಂಕೆಯ ಕೊಂಬು ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಪೊಲೀಸ್ ಅರಣ್ಯ ಸಂಚಾರಿ ದಳದ ಅಧೀಕ್ಷಕ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿ ಎಸ್ ಐ ಎಂ.ಡಿ. ಅಪ್ಪಾಜಿ ಅವರ ನೇತೃತ್ವದಲ್ಲಿ ಎ ಎಸ್ ಐ ಗಣೇಶ್ ,ಮುಖ್ಯ ಪೇದೆ ಚಂಗಪ್ಪ, ರಮೇಶ್ ಪಾಲ್ಗೊಂಡಿದ್ದರು.

error: Content is protected !!