ದಕ್ಷಿಣ ಕೊಡಗಿನಲ್ಲಿ ಮುಂದುವರಿದ ಹುಲಿ ದಾಳಿ : ಹಸುವಿಗೆ ಗಂಭೀರ ಗಾಯ

February 20, 2021

ಮಡಿಕೇರಿ ಫೆ.20 : ದಕ್ಷಿಣ ಕೊಡಗಿನಲ್ಲಿ ಹುಲಿಗಳ ದಾಳಿ ನಿರಂತರವಾಗಿದೆ. ಇಂದು ಕುಮುಟೂರು ಗ್ರಾಮದ ಮತ್ರಂಡ ರಘು ಅವರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ಮಾಡಿದೆ. ಹುಲಿಯ ಹಿಡಿತಕ್ಕೆ ಸಿಲುಕಿದ ಹಸು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದಲ್ಲಿ ಹುಲಿದಾಳಿ ಮಿತಿ ಮೀರಿದ್ದು, ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

error: Content is protected !!