ವಿವೇಕಾನಂದರ ಬದುಕು, ಆದರ್ಶ ಹಾಗೂ ಅಬ್ದುಲ್ ಕಲಾಂ ಪರಿಶ್ರಮ ವಿದ್ಯಾರ್ಥಿಗಳ ಬದುಕಿಗೆ ಮಾದರಿಯಾಗಲಿ: ಡಾ. ಕುಪ್ನಳ್ಳಿ ಎಂ. ಬೈರಪ್ಪ

February 20, 2021

ಮಡಿಕೇರಿ ಫೆ. 20 : ಸ್ವಾಮಿ ವಿವೇಕಾನಂದರ ಬದುಕು ಮತ್ತು ಆದರ್ಶ ಹಾಗೂ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪರಿಶ್ರಮ ವಿದ್ಯಾರ್ಥಿಗಳ ಬದುಕಿಗೆ ಮಾದರಿಯಾಗಬೇಕೆಂದು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ, ಯುವ ವಿದ್ವಾಂಸ , ಮಾನಸ ಗಂಗೋತ್ರಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಡಾ. ಕುಪ್ನಳ್ಳಿ ಎಂ.ಭೈರಪ್ಪ ಹೇಳಿದರು.

ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ, ಆಂತರಿಕ ಗುಣಮಟ್ಟ, ಭರವಸಾ ಕೋಶ ಮತ್ತು ವಿದ್ಯಾರ್ಥಿ ಭ್ರಾತೃತ್ವ ವೇದಿಕೆಯಿಂದ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಮೆಮೋರಿಯಲ್ ಹಾಲ್ ಉದ್ಘಾಟನೆ, ಭ್ರಾತೃತ್ವ ವೇದಿಕೆಯ ಉದ್ಘಾಟನೆ ಹಾಗೂ ಕ್ರಿಯಾಯೋಜನೆ ರೂಪರೇಷೆಗಳ ಪಟ್ಟಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ, ಮಾತನಾಡಿದರು.

ಸಮಸ್ಯೆಗಳು ಎಲ್ಲರಿಗೂ ಇರುತ್ತದೆ. ಅದನ್ನ ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯವಿರಬೇಕು. ಡಾ. ಎಪಿಜೆ ಅಬ್ದುಲ್ ಕಲಾಂ
ಚಿಕ್ಕ ವಯಸ್ಸಿನಲ್ಲೇ ಕಷ್ಟಗಳನ್ನು ಎದುರಿಸಿ,ಮೇಲೆ ಬಂದವರು. ಕಷ್ಟ, ಸಮಸ್ಯೆ ಇದೆ ಎಂದು, ಅಬ್ದುಲ್ ಕಲಾಂ ಎಂದಿಗೂ ಕುಗ್ಗಲಿಲ್ಲ.
ಎಲ್ಲವನ್ನೂ ಎದುರಿಸಿ ಸಾಧನೆ ಮಾಡಿದರು. ಎಲ್ಲಾ ಸಂಕಷ್ಟಗಳನ್ನು ಎದುರಿಸಿ ದೇಶದ ಪ್ರಥಮ ಪ್ರಜೆ, ರಾಷ್ಟ್ರಪತಿಯಾಗಿ ನೇಮಕಗೊಂಡು ಸಾಧಿಸಿದರು.
ಅಬ್ದುಲ್ ಕಲಾಂ ಅವರ ಛಲ,ಹಾಗೂ ಸಾಧನೆ ಮಾಡಬೇಕೆಂಬ ಕಠಿಣ ಪರಿಶ್ರಮವನ್ನು ವಿದ್ಯಾರ್ಥಿಗಳು ಜೀವನದಲ್ಲಿ ರೂಢಿಸಿಕೊಂಡರೆ ಯಶಸ್ಸು ಸಾಧಿಸುವುದು ಖಂಡಿತ ಎಂದು ಕುಪ್ನಳ್ಳಿ ಎಂ ಭೈರಪ್ಪ ಅಭಿಪ್ರಾಯಪಟ್ಟರು.

ತನ್ನ ಚಿಕ್ಕ ವಯಸ್ಸಿನಲ್ಲೇ ತನ್ನ ಬದುಕು ಹಾಗೂ ಆದರ್ಶದ ಮೂಲಕ ಜಗತ್ತಿಗೆ ಪ್ರೇರಣೆಯಾದ ಸ್ವಾಮಿ ವಿವೇಕಾನಂದರ ಬದುಕಿನ‌ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕೆಂದು ರಾಷ್ಟ್ರಪ್ರತಿ ಪ್ರಶಸ್ತಿ ಪುರಸ್ಕೃತ, ಯುವ ವಿದ್ವಾಂಸ , ಮಾನಸ ಗಂಗೋತ್ರಿ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಕುಪ್ನಳ್ಳಿ ಎಂ.ಭೈರಪ್ಪ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ ಬೋಪಯ್ಯ, ಕಾಲೇಜಿನಲ್ಲಿ ಹೊಸ ಯೋಜನೆಯನ್ನು ರೂಪಿಸಿರುವುದು ಸಂತೋಷದ ವಿಷಯವಾಗಿದೆ. ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳು ಬಹಳ ವಿರಳವಾಗಿತ್ತು.
ಆದರೆ ಇಂದಿನ‌ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ, ಹಾಗೂ ವಿವಿಧ ಯೋಜನೆಗಳಿವೆ. ಇದರ ಸದುಪಯೋಗ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮವನ್ನು ವಿರಾಜಪೇಟೆ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಶಿವಣ್ಣ ಉದ್ಘಾಟಿಸಿದರು.

ಇಂಗ್ಲೀಷ್ ವಿಭಾಗದ ಮುಖ್ಯಸ್ಥ ನಾಗರಾಜ್ ಮೂರ್ತಿ ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದರು.ವಿದ್ಯಾರ್ಥಿ ಭ್ರಾತೃತ್ವ ವೇದಿಕೆಯ 2020-21 ಸಾಲಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ
2020-21ನೇ ಸಾಲಿನ ವಿದ್ಯಾರ್ಥಿ ಭ್ರಾತೃತ್ವ ವೇದಿಕೆಯ ವಿದ್ಯಾರ್ಥಿ ಸಂಯೋಜಕರಾಗಿ ತೃತೀಯ ಬಿ.ಎ ವಿದ್ಯಾರ್ಥಿಗಳಾದ ಪ್ರಶಾಂತ್ ಹೆಚ್.ಎಸ್, ಸಂಗೀತ ಕೆ.ಜಿ ಹಾಗೂ ದ್ವಿತೀಯ ಬಿ.ಎ ವಿದ್ಯಾರ್ಥಿಗಳಾದ ಶಶಾಂಕ್ ಕೆ.ಎಸ್ ಮತ್ತು ಶ್ವೇತ ಬಿ.ಕೆ ಆಯ್ಕೆಯಾಗಿದ್ದಾರೆ ಎಂದು ನಾಗರಾಜ್ ಮೂರ್ತಿರವರು ತಿಳಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥ ರಘುರಾಜ್ ಮುಖ್ಯ ಅತಿಥಿಯಾದ ಕುಪ್ನಳ್ಳಿ ಎಂ.ಭೈರಪ್ಪ ಅವರ ಪರಿಚಯವನ್ನು ಮಾಡಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ರುದ್ರವರು ಸ್ವಾಗತಿಸಿ, ಇತಿಹಾಸ ವಿಭಾಗದ ಸಹಾಯ ಪ್ರಾಧ್ಯಾಪಕಿ ಶೃತಿ ಪಾರ್ವತಿ ವಂದಿಸಿದರು.
ಈ‌ ಸಂದರ್ಭ ವಿವಿಧ ವಿಭಾಗಗಳ ಉಪನ್ಯಾಸಕರು, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

error: Content is protected !!