ಮೊಡವೆ ಸಮಸ್ಯೆ ನಿವಾರಣೆಗೆ ಸಿಂಪಲ್ ಮನೆಮದ್ದುಗಳು

February 20, 2021

ಹದಿಹರೆಯದ ವಯಸ್ಸಿನಲ್ಲಿ ಹೆಚ್ಚಾಗಿ ಕಂಡು ಬರುವ ಸೌಂದರ್ಯ ಸಮಸ್ಯೆಯೆಂದರೆ ಮೊಡವೆ. ಎಣ್ಣೆ ತ್ವಚೆಯವರೆಗೆ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು. ಮೊಡವೆ ಬಂದರೆ ನಂತರ ಕಲೆಗಳು, ರಂಧ್ರಗಳು ಬೀಳವುದು. ಕೆಲವರಿಗೆ ಮೊಡವೆ ಮುಖದ ಅಂದವನ್ನು ಶಾಶ್ವತವಾಗಿ ಕೆಡಿಸಿ ಬಿಡುತ್ತದೆ.

ಟೀ ಟ್ರೀ ಎಣ್ಣೆ : ನೀವು ಬಳಸುವ ಕ್ಲೆನ್ಸರ್‌ಗೆ ಒಂದು ಡ್ರಾಪ್ ಟೀ ಟ್ರೀ ಎಣ್ಣೆ ಹಾಕಿ, ಇದು ವೈಟ್‌ ಹೆಡ್ಸ್ ಹಾಗೂ ಬ್ಲ್ಯಾಕ್‌ ಹೆಡ್ಸ್ ತಡೆಗಟ್ಟುವಲ್ಲಿ ಸಹಕಾರಿ.

ಗ್ರೀನ್‌ ಟೀ : ಗ್ರೀನ್‌ ಟೀಯನ್ನು ಒಂದು ಕಪ್ ನೀರಿನಲ್ಲಿ ಹಾಕಿ ಕುದಿಸಿ, ನೀರು ಆರಿದ ಮೇಲೆ ಆ ನೀರನ್ನು ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಈ ರೀತಿ ಮಾಡುವುದರಿಂದ ಮೊಡವೆ ಕಡಿಮೆಯಾಗುವುದು. ಈ ರೀತಿ ಮೊಡವೆ ಕಡಿಮೆಯಾಗುವವರೆಗೆ ಮಾಡಬೇಕು.

ಮೊಟ್ಟೆಯ ಬಿಳಿ : ಮೊಟ್ಟೆಯ ಬಿಳಿ ತ್ವಚೆ ಬಿಗಿಯಾಗಲು ಸಹಾಯ ಮಾಡುತ್ತದೆ, ಮುಖದ ತ್ವಚೆ ಬಿಗಿಯಾಗಿಯಾದರೆ ಮುಖದ ಆಕರ್ಷಣೆ ಹೆಚ್ಚುವುದು. ಇದರ ಬಿಳಿಯನ್ನು ಜೇನು ಜತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರಿತಿ ವಾರಕ್ಕೊಮ್ಮೆ ಮಾಡಿ.

ಆ್ಯಪಲ್ ಸಿಡರ್ ವಿನಿಗರ್ : ಇದನ್ನು ನೀರಿನೊಂದಿಗೆ ಮಿಕ್ಸ್ ಮಾಡಿ ಟೋನರ್ ಆಗಿ ಬಳಸುವುದರಿಂದ ಮುಖದಲ್ಲಿ ಎಣ್ಣೆ ತ್ವಚೆ ಕಡಿಮೆಯಾಗಿ ಮೊಡವೆ ಸಮಸ್ಯೆ ಕಡಿಮೆಯಾಗುವುದು.

ಐಸ್‌ ಕ್ಯೂಬ್ಸ್ : ಮೊಡವೆ ತುಂಬಾ ನೋವಾಗುತ್ತಿದ್ದರೆ ಐಸ್‌ಕ್ಯೂಬ್ಸ್ ಹಚ್ಚಿದರೆ ಸ್ವಲ್ಪ ಕಡಿಮೆಯಾಗುವುದು.

ದ್ರಾಕ್ಷಿ ಹಣ್ಣಿನ ಬಳಕೆ : ದ್ರಾಕ್ಷಿ ಹಣ್ಣಿನಲ್ಲಿ ಇರುವ ಔಷಧೀಯ ಗುಣವು ಮುಖದ ಮೇಲಿರುವ ಮೊಡವೆಯನ್ನು ನಿಯಂತ್ರಿಸುತ್ತದೆ.
ಮೊದಲಿಗೆ ನಾಲ್ಕೈದು ದ್ರಾಕ್ಷಿ ಹಣ್ಣನ್ನು ತೆಗೆದುಕೊಳ್ಳಿ.
ಅವುಗಳನ್ನು ಮಧ್ಯದಲ್ಲಿ ಕತ್ತರಿಸಿ, ಮುಖದ ಮೇಲೆ ಮೃದುವಾಗಿ ಮಸಾಜ್ ಮಾಡಿ.
ಮೊಡವೆ ಪೀಡಿತ ಪ್ರದೇಶದ ಮೇಲೆ 15-20 ನಿಮಿಷ ಆರಲು ಬಿಡಿ.
ನಂತರ ತಣ್ಣೀರಿನಿಂದ ತೊಳೆಯಿರಿ.
ನಿತ್ಯ ಈ ಕ್ರಮ ಅನುಸರಿಸಿದರೆ ಮೊಡವೆಯಿಂದ ಮುಕ್ತಿ ಪಡೆಯಬಹುದು.

ಸೌತೆಕಾಯಿ ಮಾಸ್ಕ್ : ಸೌತೆಕಾಯಿ ತಂಪು ಹಾಗೂ ಅತ್ಯುತ್ತಮ ಆರೈಕೆಯ ಗುಣ ಹೊಂದಿರುವುದರಿಂದ ಸೌಂದರ್ಯ ವರ್ಧಕ ಚಿಕಿತ್ಸೆಗೆ ಬಳಸಲಾಗುವುದು. ಸೌತೆಕಾಯಿ ಬಳಕೆಯಿಂದ ಮೊಡವೆಯನ್ನು ಸಹ ನಿವಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು: ಒಂದು ಸಣ್ಣ ಸೌತೆಕಾಯಿ, ಒಂದು ಕಪ್ ಓಟ್ ಮೀಲ್, ಒಂದು ಟೀ ಚಮಚ ಮೊಸರು.

ಬಳಸುವವಿಧಾನ : ಮೊದಲಿಗೆ ಸೌತೆಕಾಯಿಯ ಸಿಪ್ಪೆಯನ್ನು ತೆಗೆದು, ಮೃದುವಾದ ಪೇಸ್ಟ್ ತಯಾರಿಸಿಕೊಳ್ಳಿ.
ಒಂದು ಕಪ್ ಓಟ್ ಮೀಲ್ ಅನ್ನು ಮೃದುವಾಗಿ ಬೇಯಿಸಿಕೊಳ್ಳಿ. ಬೇಯಿಸಿದ ಓಟ್ ಮೀಲ್, ಸೌತೆಕಾಯಿ ಪೇಸ್ಟ್ ಮತ್ತು ಒಂದು ಟೀ ಚಮಚ ಮೊಸರನ್ನು ಸೇರಿಸಿ ಮಿಶ್ರಗೊಳಿಸಿ. ಮೃದುವಾದ ಮಿಶ್ರಣವನ್ನು ಮುಖ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.
30 ನಿಮಿಷಗಳ ಬಳಿಕ ಮೃದುವಾದ ನೀರಿನಿಂದ ಸ್ವಚ್ಛಗೊಳಿಸಿ. ಈ ಕ್ರಮವನ್ನು ಗಣನೀಯವಾಗಿ ಅನುಸರಿಸುವುದರಿಂದ ಮೊಡವೆಯನ್ನು ಕಡಿಮೆ ಮಾಡಬಹುದು.

ಜೇನುತುಪ್ಪದ ಫೇಸ್ ಪ್ಯಾಕ್ : ಮೊಡವೆಗೆ ಆಳದಿಂದ ಚಿಕಿತ್ಸೆ ನೀಡುವ ಗುಣ ಜೇನುತುಪ್ಪಕ್ಕೆ ಇದೆ. ಇದನ್ನು ಸೂಕ್ತ ರೀತಿಯಲ್ಲಿ ಬಳಸುವುದರ ಮೂಲಕ ಮೊಡವೆಯನ್ನು ನಿಯಂತ್ರಿಸಬಹುದು.
ಜೇನುತುಪ್ಪದ ಫೇಸ್ ಪ್ಯಾಕ್ ಹೊಂದುವ ಪರಿ:
ಮೊದಲು ನಿಮ್ಮ ಮುಖವನ್ನು ಸ್ವಚ್ಛವಾಗಿ ತೊಳೆಯಿರಿ.
ನಂತರ ಶುದ್ಧವಾದ ಜೇನುತುಪ್ಪವನ್ನು ಅನ್ವಯಿಸಿ, 30 ನಿಮಿಷಗಳ ಕಾಲ ಆರಲು ಬಿಡಿ.
ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.
ಮುಖದಲ್ಲಿ ತೆರೆದ ರಂಧ್ರಗಳು ಮುಚ್ಚಿಕೊಳ್ಳಲು, ಪುನಃ ತಣ್ಣೀರಿನಲ್ಲಿ ಒಮ್ಮೆ ತೊಳೆಯಿರಿ.
ಈ ಕ್ರಮವನ್ನು ನಿತ್ಯ ಅನುಸರಿಸಿದರೆ ಮುಖದಲ್ಲಿ ಇರುವ ಮೊಡವೆಗಳು ಕಡಿಮೆಯಾಗುತ್ತವೆ.

ನಿಂಬೆ ಮತ್ತು ಮೊಟ್ಟೆಯ ಫೇಸ್ ಪ್ಯಾಕ್ : ನಿಂಬೆ ಮತ್ತು ಮೊಟ್ಟೆ ಸಮೃದ್ಧವಾದ ಪ್ರೋಟೀನ್‍ಗಳನ್ನು ಒಳಗೊಂಡಿವೆ. ಇವು ಮೊಡವೆ ನಿವಾರಣೆಯಲ್ಲಿ ಅದ್ಭುತ ಕಾರ್ಯನಿರ್ವಹಿಸುವುದು.
ಅಗತ್ಯ ಸಾಮಾಗ್ರಿಗಳು: ನಿಂಬೆ ರಸ, ಮೊಟ್ಟೆ

ಬಳಸುವ ವಿಧಾನ : ಒಂದು ನಿಂಬೆ ಹಣ್ಣನ್ನು ಕತ್ತರಿಸಿ, ಅರ್ಧ ಭಾಗದ ರಸವನ್ನು ತೆಗೆದುಕೊಳ್ಳಿ.
ನಿಂಬೆ ರಸಕ್ಕೆ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ, ಚೆನ್ನಾಗಿ ಮಿಶ್ರಮಾಡಿ.
ರಾತ್ರಿ ನಿದ್ರೆ ಮಾಡುವಾಗ ಈ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿಕೊಂಡು ನಿದ್ರೆ ಮಾಡಿ.
ಬೆಳಿಗ್ಗೆ ಎದ್ದ ಮೇಲೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ವಾರದಲ್ಲಿ ಎರಡು ಬಾರಿ ಈ ಕ್ರಮ ಅನುಸರಿಸಿದರೆ ಮೊಡವೆ ಬಹುಬೇಗ ನಿವಾರಣೆಯಾಗುವುದು.

ಅರಿಶಿನದ ಫೇಸ್ ಪ್ಯಾಕ್ : ಪುರಾತನ ಕಾಲದಿಂದಲೂ ಸೌಂದರ್ಯ ವರ್ಧಕ ಉತ್ಪನ್ನವನ್ನಾಗಿ ಅರಿಶಿನವನ್ನು ಬಳಸಲಾಗುತ್ತಿದೆ. ನಂಜು ನಿವಾರಿಸುವ, ಕಲೆ ತೆಗೆಯುವ ಹಾಗೂ ಆರೋಗ್ಯಕರ ತ್ವಚೆಯನ್ನು ನೀಡುವ ಶಕ್ತಿಯನ್ನು ಪಡೆದುಕೊಂಡಿದೆ. ಇದರ ಫೇಸ್ ಪ್ಯಾಕ್ ಹೊಂದುವುದರಿಂದ ಮೊಡವೆಯನ್ನು ಸುಲಭವಾಗಿ ನಿವಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು: ಅರ್ಧ ಕಪ್ ಕಡ್ಲೆ ಹಿಟ್ಟು, 2 ಟೀ ಚಮಚ ಅರಿಶಿನ, 2 ಟೀ ಚಮಚ ಶ್ರೀಗಂಧದ ಪುಡಿ, ಸ್ವಲ್ಪ ತುಪ್ಪ ಅಥವಾ ಬೆಣ್ಣೆ , ಸ್ವಲ್ಪ ನೀರು.

ಬಳಸುವ ವಿಧಾನ : ಒಂದು ಬೌಲ್ ಅಲ್ಲಿ 2 ಟೀ ಚಮಚ ಅರಿಶಿನ, ಅರ್ಧ ಕಪ್ ಕಡ್ಲೆ ಹಿಟ್ಟು, 2 ಟೀ ಚಮಚ ಶ್ರೀಗಂಧದ ಪುಡಿ, ಸ್ವಲ್ಪ ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸಿ.
ಮೃದುವಾದ ಮಿಶ್ರಣವನ್ನು ತಯಾರಿಸಲು ಅಗತ್ಯವಾದಷ್ಟು ನೀರನ್ನು ಸೇರಿಸಿ.
ಮಿಶ್ರಣವನ್ನು ಮುಖ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.
5 ರಿಂದ 10 ನಿಮಿಷಗಳ ಕಾಲ ಆರಲು ಬಿಡಿ.
ನಂತರ ಮೃದುವಾಗಿ ಒಮ್ಮೆ ಮಸಾಜ್ ಮಾಡಿ, ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.
ವಾರಕ್ಕೊಮ್ಮೆ ಈ ಕ್ರಮವನ್ನು ಅನುಸರಿಸಿ ಮೊಡವೆಯನ್ನು ನಿವಾರಿಸಬಹುದು.