ಫೆ.22 ರಂದು ಗೋಣಿಕೊಪ್ಪಲಿನಲ್ಲಿ ಪ್ರಗತಿ ಸ್ಟಡಿ ಸೆಂಟರ್ ಆರಂಭ

February 20, 2021

ಮಡಿಕೇರಿ ಫೆ. 20 : ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್‍ನ ನೂತನ ಶಾಖೆ ಫೆ.22 ರಂದು ಗೋಣಿಕೊಪ್ಪಲಿನಲ್ಲಿ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪುತ್ತೂರು ಪ್ರಗತಿ ಎಜುಕೇಶನ್ ಪೌಂಡೇಶನ್‍ನ ಸ್ಥಾಪಕಾಧ್ಯಕ್ಷ ಪಿ.ವಿ.ಗೋಕುಲ್‍ನಾಥ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಗೋಣಿಕೊಪ್ಪಲಿನ ಪೂಜಾರಿ ಆರ್ಕೆಡ್‍ನಲ್ಲಿ ನೂತನ ಶಾಖೆ ಪ್ರಾರಂಭವಾಗಲಿದ್ದು, ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಶ್ರೀ ಭೋದಸ್ವರೂಪನಂದಜೀ ಮಹರಾಜ್ ಉದ್ಘಾಟಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪ ಕಾವೇರಿ ಕಾಲೇಜ್ ನ ಪ್ರಾಂಶುಪಾಲ ಐ.ಕೆ.ಬಿದ್ದಪ್ಪ, ವಿರಾಜಪೇಟೆ ಕಾವೇರಿ ಕಾಲೇಜ್ ನ ಪ್ರಾಂಶುಪಾಲ ಎ.ಎಂ.ಕಮಲಾಕ್ಷಿ, ಗೋಣಿಕೊಪ್ಪಲಿನ ಜಯಲಕ್ಷ್ಮಿ ಜ್ಯುವೆಲರ್ಸ್‍ನ ಎಂ.ಜಿ.ಮೋಹನ್, ಪೂಜಾರಿ ಆರ್ಕೆಡ್‍ನ ಮಾಲೀಕ ಪ್ರಕಾಶ್ ಪೂಜಾರಿ ಪಾಲ್ಗೊಳ್ಳಲಿದ್ದಾರೆ.
ಕೊಡಗಿನಿಂದ ಪುತ್ತೂರಿಗೆ ಅನೇಕ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಆಗಮಿಸುತ್ತಿದ್ದು, ಪೋಷಕರ ಕೋರಿಕೆ ಮೇರೆಗೆ ಗೋಣಿಕೊಪ್ಪಲಿನಲ್ಲಿ ಪ್ರಗತಿ ಸ್ಟಡಿ ಸೆಂಟರ್ ನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದರು.
ಪಿ.ಎ.ಗೋಕುಲ್‍ನಾಥ್ ಹಾಗೂ ಹೇಮಲತಾ ಗೋಕುಲ್‍ನಾಥ್ ಅವರ ನೇತೃತ್ವದಲ್ಲಿ ಪ್ರಗತಿ ಸ್ಟಡಿ ಸೆಂಟರ್’ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಕೊಡಗು, ಮೈಸೂರು, ಬೆಂಗಳೂರು, ಕೋಲಾರ, ಹಾಸನ, ಚಿತ್ರದುರ್ಗ, ಉತ್ತರ ಕನ್ನಡ, ಶಿವಮೊಗ್ಗ, ಹುಬ್ಬಳ್ಳಿ, ಗದಗ, ಕೇರಳದ ಕಾಸರಗೋಡು ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.
ಸಂಜೆ ಟ್ಯೂಷನ್’ ತರಗತಿಗಳನ್ನು ಆರಂಭಿಸಿ, ಒಂದರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಲ್ಲೂ ತರಬೇತಿಗಳನ್ನು ನೀಡಲಾಗುತ್ತಿತ್ತು. 2008 ಅಕ್ಟೋಬರ್ ನಿಂದ ನವೋದಯ ಪ್ರವೇಶ ಪರೀಕ್ಷೆಗಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಪ್ರಾರಂಭಿಸಿದ್ದು, ಇದೀಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಲ್ಲದೇ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದ್ದು, ಅನುತ್ತೀರ್ಣರಾದ ಮತ್ತು ಸೌಲಭ್ಯವಂಚಿತರಾದ ವಿದ್ಯಾರ್ಥಿಗಳಿಗೆ ಪ್ರತಿಭಾವಂತ ಉಪನ್ಯಾಸಕರಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಭದ್ರತೆಗೂ ಪ್ರಾಮುಖ್ಯತೆ ನೀಡಿದ್ದು, ಸಂಸ್ಥೆಯ ಪ್ರವೇಶ ದ್ವಾರದಿಂದ ಪ್ರಾರಂಭಿಸಿ ಪ್ರತಿ ತರಗತಿಗಳಿಗೂ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ. ಪುತ್ತೂರಿನ ಕೋಚಿಂಗ್ ಕ್ಲಾಸ್‍ಗಳಲ್ಲೇ ಸಮವಸ್ತ್ರ ಹಾಗೂ ಐಡೆಂಟಿಟಿ ಕಾರ್ಡ್‍ಗಳನ್ನು ಪರಿಚಯಿಸಿದ ಮೊದಲ ಶಿಕ್ಷಣ ಸಂಸ್ಥೆ ಇದಾಗಿದೆ ಎಂದರು.
ಕನಿಷ್ಠ 35ರಷ್ಟು ಅಂಕ ಗಳಿಸಿ ತೇರ್ಗಡೆ ಆದ ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಶಿಕ್ಷಣವನ್ನು ನೀಡಲು ಮುಂದಾಗಿದ್ದು, ಯಾವುದೇ ಶಾಲಾ, ಕಾಲೇಜುಗಳಲ್ಲಿ ಅನುತ್ತಿರ್ಣರಾದ ವಿದ್ಯಾರ್ಥಿಗಳನ್ನು ಪ್ರಗತಿ ಸ್ಟಡಿ ಸೆಂಟರ್‍ಗೆ ಕಳುಹಿಸಿಕೊಡುವಂತೆ ಪಿ.ವಿ.ಗೋಕುಲ್‍ನಾಥ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸ್ಟಡಿ ಸೆಂಟರ್‍ನ ಉಪಾಧ್ಯಕ್ಷೆ ಕೆ.ಹೇಮಲತ, ಪ್ರಗತಿ ರೆಸಿಡೆನ್ಸಿ ಸೆಂಟರ್‍ನ ಪ್ರಾಂಶುಪಾಲೆ ರೇಣುಕಾ ಸಂದೀಪ್, ಇತಿಹಾಸ ಉಪನ್ಯಾಸಕಿ ಪಿ.ಎಸ್.ವಿಮಲ ಲಕ್ಷ್ಮಣ್ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕಿ ಕೆ. ದಿಪ್ತಿ ಉಪಸ್ಥಿತರಿದ್ದರು.

error: Content is protected !!