ಫೆ.24 ರಂದು ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ

February 20, 2021

ಮಡಿಕೇರಿ ಫೆ.20 : ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಇವರ ಸಹಯೋಗದಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯ ಅಡಿಯಲ್ಲಿ ಫೆಬ್ರವರಿ, 24 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ನಡೆಯಲಿದೆ.
ಈ ಉದ್ಯೋಗಮೇಳದಲ್ಲಿ ಕೆಫೆ ಕಾಫಿ ಡೇ, ರಾಣಿ ಮದ್ರಾಸ್ ಪ್ರೈ ಲಿ., ಎನ್‍ಟಿಟಿಎಫ್, ಹಿಂದೂಜ ಗ್ಲೋಬಲ್ ಸೊಲ್ಯೂಷನ್, ಮಹೇಂದ್ರ ಹಾಲಿ ಡೇ ಮತ್ತು ರೆಸಾಟ್ರ್ಸ್, ಯುರೇಕ ಫೋಬ್ಸ್, ಮಾಂಡೋವಿ ಮೋಟರ್ಸ್, ಆಲ್ಫಾ ಟೆಕ್ನಾಲಜಿಸ್, 3 ಟೆಕ್ನಾಲಜಿಸ್, ಜಸ್ಟ್ ಡಯಲ್, ಅಸ್ಪಿನೊ ಪ್ರೈ.ಲಿ., ಯಂಗ್ ಇಂಡಿಯಾ, ಸಿಪೆಟ್ ಮೈಸೂರ್, ಸ್ಟಾರ್ ಮಾರ್ಕ್ ಸಾಫ್ಟ್‍ವೇರ್, ಕೋಗೆನ್ಟ್ ಇ- ಸರ್ವೀಸ್, ಮೂತ್ತೂಟ್ ಫೈನಾನ್ಸ್, ಪ್ರೈ. ಲಿ., ಕ್ಯಾನೀಸ್ ಟೆಕ್ನಾಲಜಿ ಪ್ರೈ. ಲಿ., ಯೆಲ್ಲೋ ಬಾಂಬೂ ರೆಸಾರ್ಟ್, ದಿ ತಮಾರಾ ರೆಸಾರ್ಟ್, ಎಕ್ಸ್‍ಟ್ರಿಮ್ ಸಾಫ್ಟ್‍ಟೆಕ್, ಅಪೋಲೋ ಮೆಡ್‍ಸ್ಕಿಲ್ಸ್ ಲಿ., ಪಿಎಂಕೆವಿವೈ ಮತ್ತು ಇತರೆ ಸಂಸ್ಥೆಗಳು ಭಾಗವಹಿಸಿ ತಮ್ಮಲ್ಲಿ ಖಾಲಿಯಿರುವ ಅಂದಾಜು 500 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮ ಯಾವುದೇ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಉದ್ಯೋಗಮೇಳದಲ್ಲಿ ಭಾಗವಹಿಸಬಹುದು. ಉದ್ಯೋಗಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಹೆಸರನ್ನು ಅಂತರ್ಜಾಲ ತಾಣದಲ್ಲಿರುವ https://forms.gle/LiAnL3bu9xEiJZGdA ಉಜಂ ಎಂಬ ಲಿಂಕನ್ನು ಬಳಸಿಕೊಂಡು ನೋಂದಾಯಿಸಿಕೊಳ್ಳಬಹುದು. ಉದ್ಯೋಗಾಕಾಂಕ್ಷಿಗಳ ನೋಂದಣಿ ಹಾಗೂ ಸಂದರ್ಶನ ಉಚಿತವಾಗಿರುತ್ತದೆ. ಅಭ್ಯರ್ಥಿಗಳು ಕನಿಷ್ಠ 10 ಸ್ವ-ವಿವರಗಳ ಪ್ರತಿಗಳೊಂದಿಗೆ ಉದ್ಯೋಗಮೇಳದಲ್ಲಿ ಹಾಜರಾಗುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಅವರು ತಿಳಿಸಿದ್ದಾರೆ.

error: Content is protected !!