ಶ್ರೀಮಂಗಲ ಕುಮಟೂರು ಗ್ರಾಮದಲ್ಲಿ ಹುಲಿ ದಾಳಿಗೆ ವಿದ್ಯಾರ್ಥಿ ಬಲಿ

February 20, 2021

ಮಡಿಕೇರಿ ಫೆ.20 : ನಿರಂತರ ಹುಲಿ ದಾಳಿಯಿಂದ ನಲುಗಿ ಹೋಗಿರುವ ದಕ್ಷಿಣ ಕೊಡಗಿನಲ್ಲಿ ಇಂದು ಮಾನವ ಜೀವವೊಂದು ಬಲಿಯಾಗಿದೆ.
ಶ್ರೀಮಂಗಲ ಕುಮಟೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಎರವರ ಅಯ್ಯಪ್ಪ (16) ಮೃತ ದುರ್ದೈವಿ. ಸಂಜೆ ನೀರು ತರಲೆಂದು ಲೈನ್ ಮನೆಯ ಸಮೀಪ ತೆರಳುತ್ತಿದ್ದ ಸಂದರ್ಭ ಹುಲಿ ದಾಳಿ ಮಾಡಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತ ಎರವರ ಬಸವ ಎಂಬುವವರ ಪುತ್ರನಾಗಿದ್ದು, ಶ್ರೀಮಂಗಲ ಶಾಲೆಯ 8 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.
ಕುಮಟೂರ್ ಗ್ರಾಮದ ಬೆಳೆಗಾರ ಕೋಟ್ರಂಗಡ ಬಿದ್ದಪ್ಪ ಎಂಬುವವರ ಲೈನ್ ಮನೆಯಲ್ಲಿ ಬಸವ ಅವರ ಕುಟುಂಬ ವಾಸವಾಗಿತ್ತು.

error: Content is protected !!