ಕುಶಾಲನಗರ : ಕೇಂದ್ರದಲ್ಲಿ ಹಿಟ್ಲರ್ ಆಡಳಿತ ನಡೆಯುತ್ತಿದೆ : ರಾಮಲಿಂಗಾರೆಡ್ಡಿ ಆರೋಪ

February 20, 2021

ಮಡಿಕೇರಿ ಫೆ.20 : ಕೇಂದ್ರ ಸರ್ಕಾರ ಜನವಿರೋಧಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಹಿಟ್ಲರ್ ಆಡಳಿತವನ್ನು ನಡೆಸುತ್ತಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಕಾರ್ಯಕ್ರಮ ನಿಮಿತ್ತ ಕೊಡಗಿಗೆ ಅಗಮಿಸಿದ್ದ ರಾಮಲಿಂಗಾರೆಡ್ಡಿಯವರನ್ನು ಕುಶಾಲನಗರ ಕಾಂಗ್ರೆಸ್ ಕಾರ್ಯಕರ್ತರು ಕೊಪ್ಪ ಗೇಟ್ ಬಳಿ ಬರಮಾಡಿಕೊಂಡ ಸಂದರ್ಭ,  ಪತ್ರಕರ್ತರೊಂದಿಗೆ ಮಾತನಾಡಿದ ಅವರು,  ಸರ್ಕಾರ, ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಜನೋಪಯೋಗಿ ವಸ್ತುಗಳ ಬೆಲೆ ಏರಿಸುವುದರ ಮೂಲಕ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದರು.‌ ಮೀಸಲಾತಿ ಎಂಬುದು ಒಂದು ಜಾತಿಗೆ ಸೀಮಿತವಾಗಿರದೆ .ಪ್ರತಿ ಜಾತಿಗಳಲ್ಲಿರುವ ಬಡವರಿಗೆ ಮೀಸಲಾತಿ ಸಿಗುವಂತಾಗಬೇಕು ಎಂದರು.

error: Content is protected !!