ಸೋಮವಾರಪೇಟೆಯಲ್ಲಿ ಜ್ಯೋತಿ ಬಾಪುಲೆ ಜನ್ಮ ದಿನಾಚರಣೆ

February 20, 2021

ಸೋಮವಾರಪೇಟೆ ಫೆ.20 : ದಲಿತ ಹಿತರಕ್ಷಣ ವೇದಿಕೆಯ ಒಕ್ಕೂಟದ ವತಿಯಿಂದ 194ನೇ ಜ್ಯೋತಿ ಬಾಪುಲೆ ಅವರ ಜನ್ಮ ದಿನಾಚರಣೆಯನ್ನು ಶನಿವಾರ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಒಕ್ಕೂಟದ ಸಂಚಾಲಕರಾದ ಜಯಪ್ಪ ಹಾನಗಲ್ಲು ಉದ್ಘಾಟಿಸಿದರು. ಅವರು ಮಾತನಾಡಿ ಮೊಟ್ಟ ಮೊದಲು ಸಮಾಜದ ಶೋಷಿತರಿಗಾಗಿ ಶಾಲೆ ತೆರೆದು ವಿದ್ಯೆ ಕಲಿಯಲು ಅವಕಾಶ ಮಾಡಿಕೊಟ್ಟು ಸಮಾಜದ ಪರಿವರ್ತನೆಗಾಗಿ ಜೀವಿತದ ಕೊನೆವರೆಗೂ ದುಡಿದವರು ಜ್ಯೋತಿ ಬಾಪುಲೆ ಎಂದರು. ವಿಧವೆಯವರಿಗೆ ಮರು ವಿವಾಹ ಮಾಡಿಸಿಕೊಡುವ ಮೂಲಕ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿದರು. ಅಂದೇ 5 ಶಾಲೆಗಳನ್ನು ತೆರೆದು 235 ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿದಲ್ಲದೆ, ತಮ್ಮ ಪತ್ನಿ ಸಾವಿತ್ರಿಬಾಯಿ ಪುಲೆ ಅವರಿಗೂ ಶಿಕ್ಷಣ ನೀಡಿ ಶಿಕ್ಷಕರಾಗುವಂತೆ ಮಾಡಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಡಿ.ಎಸ್. ನಿರ್ವಾಣಪ್ಪ, ಉಪಾಧ್ಯಕ್ಷ ಕೆ.ಬಿ. ರಾಜು, ನರಸಯ್ಯ ಅಜಯ್, ವೀಣಾ, ಕಾಳಪ್ಪ ಮತ್ತಿತರರು ಇದ್ದರು.

error: Content is protected !!