ಫೆ.23 ರಂದು ನಿಟ್ಟೂರು ಕಾರ್ಮಾಡು ಗ್ರಾಮದಲ್ಲಿ ‘ನಮ್ಮ ಜನ-ನಮ್ಮ ಸಂಸ್ಕೃತಿ ಗಿರಿಜನೋತ್ಸವ

21/02/2021

ಮಡಿಕೇರಿ ಫೆ.21 : ಕೊಡಗು ವನವಾಸಿ ಕಲ್ಯಾಣ ಕೇಂದ್ರ, ಮೈಸೂರು ರಂಗಾಯಣ ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ ‘ನಮ್ಮ ಜನ-ನಮ್ಮ ಸಂಸ್ಕೃತಿ” ಗಿರಿಜನೋತ್ಸವ ಕಾರ್ಯಕ್ರಮವು ಫೆ.23 ರಂದು ಬೆಳಗ್ಗೆ 10 ಗಂಟೆಗೆ ನಿಟ್ಟೂರು ಗ್ರಾ.ಪಂ.ಗೆ ಸೇರಿದ  ಕಾರ್ಮಾಡು ಗ್ರಾಮದಲ್ಲಿ ನಡೆಯಲಿದೆ. 

       ಶಾಸಕರು ಹಾಗೂ ಕರ್ನಾಟಕ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ, ಪೊನ್ನಂಪೆಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಜಡೇಗೌಡ, ದಕ್ಷಿಣ ಭಾರತ ವನವಾಸಿ ಹಿತರಕ್ಷಣಾ ಪ್ರಮುಖರಾದ  ಕೃಷ್ಣಮೂರ್ತಿ, ರಂಗಾಯಣ ನಿರ್ದೇಶಕರಾದ ಅಡ್ಡಂಡ ಸಿ. ಕಾರ್ಯಪ್ಪ, ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಂ ಸಿದ್ದಿ,ವನವಾಸಿ ಕಲ್ಯಾಣ ಪ್ರಾಂತ ಅದ್ಯಕ್ಷರಾದ ಚಕ್ಕೇರ ಮನು ಕಾವೇರಪ್ಪ, ವಿರಾಜಪೇಟೆ ತಾ.ಪಂ. ಅಧ್ಯಕ್ಷರಾದ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷರಾದ ನೆಲ್ಲಿರ ಚಲನ್‍ಕುಮಾರ್, ನಿಟ್ಟೂರು ಗ್ರಾ.ಪಂ.ಅಧ್ಯಕ್ಷರಾದ ಚೆಕ್ಕೇರ ಅಯ್ಯಪ್ಪ ಸೂರ್ಯ, ವನವಾಸಿ ಕಲ್ಯಾಣ ಕೇಂದ್ರ ಅಧ್ಯಕ್ಷರಾದ ಯರವರ ಪ್ರಕಾಶ್,  ರಂಗಾಯಣ ಜಂಟಿ ನಿರ್ದೇಶಕರಾದ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಇತರರು ಪಾಲ್ಗೊಳ್ಳಲಿದ್ದಾರೆ. 

 ಗಿರಿಜನೋತ್ಸವ ಕಾರ್ಯಕ್ರಮದಲ್ಲಿ ಕಲೆಯಲ್ಲಿ ವಿಶೇಷ ಸಾಧನೆಗೈದ ಮರಿ,ದಾಸಿ- ಕುರುಬ ಜನಪದ ಕಲೆ, ಪಂಜರಿ ಯರವರ ಚಾತ-ಯರವ ಸಂಸ್ಕ್ರತಿ, ಸೋಲಿಗರ ನಾಗಮ್ಮ-ನಾಟಿ ಔಷಧಿ, ಬೆಟ್ಟ ಕುರುಬ ಕಾಳ-ಗಿರಿಜನ ಹೋರಾಟಗಾರ, ಯರವರ ಚಿಣ್ಣಿ-ಆರಾಧನೆ ಸಾಧಕರಿಗೆ ಗೌರವ ಸನ್ಮಾನ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಯರವರ ಚೀನಿದುಡಿ-ಯರವರ ಪಿ.ಕಾಳ ತಂಡ ಮಾಯಮುಡಿ, ಜೇನುಕುರುಬರ ಕೋಲಟ- ಜೆ.ಕೆ.ರಾಮು ತಂಡ ಕುಶಾಲನಗರ, ಉರ್‍ಟಿಕೊಟ್ಟ್ ಆಟ್-ಗೋಪಮ್ಮ ಮಹಿಳ ತಂಡ ತೋಮರ, ಸೋದೋದಿಮ್ಮಿ ಕುಣಿತ-ರಮೇಶ್ ತೋಡ ನಾಣಚ್ಚಿ ನಾಗರಹೊಳೆ, ದೇವರ ಕರಿಯಾಟ-ಬೆಟ್ಟಕುರುಬರ ಸುಮಾ ತಂಡ, ಮತ್ತೂರು, ಯರವದೇವರ ಕುಣಿತ-ಯರವರ ಪ್ರಕಾಶ್ ತಂಡ, ಬ್ರಹ್ಮಗಿರಿ ಇವು ಕಾರ್ಯಕ್ರಮದಲ್ಲಿ ಭಾಗವಹಿಸುವ ಜಿಲ್ಲೆಯ ಕಲಾ ತಂಡಗಳಾಗಿವೆ.  ಕೊರಗರ ಡೋಲು-ಬಾಬು ಪಾಂಗಳ ತಂಡ ದಕ್ಷಿಣಕನ್ನಡ ಜಿಲ್ಲೆ, ಪೂಜಾ ಕುಣಿತ-ಮಾದೇಶ ಪೂಜ ಕುಣಿತ ತಂಡ ರಾಮನಗರ ಜಿಲ್ಲೆ, ಸಿದ್ದಿ ಡಮಾಮಿ ನೃತ್ಯ- ಅಮ್ಮಚ್ಚೆ ಮೌಳಿ ಸಿದ್ದಿ ಕಲಾತಂಡ, ಉತ್ತರಕನ್ನಡ ಜಿಲ್ಲೆ, ಗೊರುಕನ ನೃತ್ಯ- ಸೋಲಿಗ ಕಲಾಸಂಘ ಚಾಮರಾಜನಗರ ಜಿಲ್ಲೆ, ಕಂಸಾಳೆ ನೃತ್ಯ- ಕುಮಾರ್ ನಾಯಕ್ ತಂಡ ಪಿರಿಯಾಪಟ್ಟಣ ಜಿಲ್ಲೆ, ಕೀಲು ಕುದುರೆ- ಮಂಜುನಾಥ ತಂಡ ತುಮಕೂರು, ಡೊಳ್ಳು ಕುಣಿತ-ನಾಗನಾಯಕ ತಂಡ ಮೈಸೂರು, ಕರಡಿ ಕುಣಿತ- ರಮೇಶ ತಂಡ ಹೆಚ್.ಡಿ.ಕೋಟೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ಹೊರ ಜಿಲ್ಲೆಯ ಕಲಾ ತಂಡಗಳಾಗಿವೆ.