ರುಚಿ ನೋಡಿ : ಪಪ್ಪಾಯಿ‌ ಹಲ್ವಾ

February 22, 2021

ಪಪ್ಪಾಯಿ ಹಲ್ವಾ (ಪರಂಗಿ)

ಬೇಕಾಗುವ ಸಾಮಗ್ರಿಗಳು : ಹಣ್ಣಾದ ಪಪ್ಪಾಯ 1, ತುಪ್ಪ, ಕಾರ್ನಫ್ಲೋರ್, ಸಕ್ಕರೆ, ಹಾಲು, ಏಲಕ್ಕಿ, ಉಪ್ಪು, ವೇನಿಲ ಅಸೆನ್ಸ್, ಬಾದಾಮಿ, ಗೇರು ಬೀಜ

ಮಾಡುವ ವಿಧಾನ : ಮೊದಲು ಹಣ್ಣಾದ ಪಪ್ಪಾಯಿಯ ಸಿಪ್ಪೆಯನ್ನು ತೆಗೆದು, ಹಣ್ಣನ್ನು ನೀರಿನಲ್ಲಿ ತೊಳೆದು, ಹಣ್ಣಿನ ತಿರುಳು ತೆಗೆದುಕೊಂಡು ರುಬ್ಬಿಕೊಳ್ಳಿ,ಇದನ್ನು ಒಂದುಪಾತ್ರಗೆ ಹಾಕಿ ಚೆನ್ನಾಗಿ ಕೈಯಾಡಿಸಿ, ಅನಂತರ 3/4 (3/4 cup) ಕಪ್ ಹಾಲಿಗೆ 5 ಚಮಚ ಕಾರ್ನಫ್ಲೋರ್ ( cornflour) ಚೆನ್ನಾಗಿ ಕಲಸಿ, ಇದನ್ನು ಕುದಿಯುತಿರುವ ಪಪ್ಪಾಯ ತಿರುಳಿಗೆ ಹಾಕಿ ಗಂಟು ಬರದ ಹಾಗೆ ನೋಡಿಕೊಳ್ಳಿ,ಇದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ, ಚಿಟಕಿ ಉಪ್ಪು, 4 ಟೇಬಲ್ ಚಮಚ ತುಪ್ಪ ಹಾಕಿ,1 ಟೀ ಚಮಚ ವೆನಿಲ್ಲಾ ರಸ..(vanilla essence ) ಅಂಗಡಿಗಳಲ್ಲಿ ದೊರೆಯುತ್ತದೆ ,ಏಲಕ್ಕಿ ಪುಡಿ,ಹಾಕಿ ತಾಳ ಬಿಡುವವರೆಗೆ ಕೈಯಾಡಿಸಿ, ನಂತರ ಬಾದಮಿ,ಗೇರು ಬೀಜ ಹಾಕಿ,ಒಂದು ತಟ್ಟೆಯಲ್ಲಿ ತಣ್ಣನೆ ಆಗಲು ಬಿಡಿ,ನಂತರ ನಿಮ್ಮ ಇಷ್ಟದ ಆಕಾರದಲ್ಲಿ ಕತ್ತರಿಸಿ ಸವಿಯಿರಿ.

                                      ಕೊಳ್ಳಿಮಾಡ ರಾಕಿ

error: Content is protected !!