ಹಿಂದೂ ವಿರೋಧಿ ಡಿಎಂಕೆಯನ್ನು ಸೋಲಿಸಿ : ತಮಿಳುನಾಡಿನ ಜನರಲ್ಲಿ ತೇಜಸ್ವಿ ಸೂರ್ಯ ಮನವಿ

February 22, 2021

ಸೇಲಂ (ಚೆನ್ನೈ): ಡಿಎಂಕೆಯನ್ನು ಹಿಂದೂ ವಿರೋಧಿ ಎಂದು ಕರೆದಿರುವ ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥ ತೇಜಸ್ವಿ ಸೂರ್ಯ ತಮಿಳುನಾಡಿನಲ್ಲಿ ಎಂಕೆ ಸ್ಟಾಲಿನ್‌ ಪಕ್ಷವನ್ನು ಸೋಲಿಸಿ ಎಂದು ಜನರಲ್ಲಿ ಮನವಿ ಮಾಡಿದರು. ಅದಲ್ಲದೇ ಬಿಜೆಪಿ ಮಾತ್ರ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ ಎಂದು ಹೇಳಿದ್ದಾರೆ.

ಸೇಲಂನಲ್ಲಿ ಭಾನುವಾರ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಡಿಎಂಕೆ ಪಕ್ಷವೂ ಹಿಂದೂ ವಿರೋಧಿಯಾಗಿರುವ ಕೆಟ್ಟ ಸಿದ್ಧಾಂತವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಬ್ಬ ತಮಿಳಿಗ ಹೆಮ್ಮೆಯ ಹಿಂದೂ. ಇದು ದೇಶದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ಹೊಂದಿರುವ ಪವಿತ್ರ ಭೂಮಿ ಎಂದು ಹೇಳಿದರು.

ತಮಿಳುನಾಡಿನ ಪ್ರತಿ ಇಂಚು ಪವಿತ್ರವಾಗಿದೆ, ಆದರೆ, ಇಲ್ಲಿನ ಡಿಎಂಕೆ ಹಿಂದೂ ವಿರೋಧಿಯಾಗಿದೆ. ಆದ್ದರಿಂದ ನಾವು ಡಿಎಂಕೆಯನ್ನು ಸೋಲಿಸಲೇಬೇಕು ಎಂದ ಅವರು, ತಮ್ಮ ಪಕ್ಷವು ತಮಿಳುನಾಡು ಮತ್ತು ತಮಿಳು ಭಾಷೆಯ ಉತ್ಸಾಹವನ್ನು ಪ್ರತಿನಿಧಿಸುತ್ತದೆ ಎಂದು ಪ್ರತಿಪಾದಿಸಿದರು.

ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳನ್ನು ಗೌರವಿಸುವ ಮತ್ತು ಪ್ರೋತ್ಸಾಹಿಸುವ ಏಕೈಕ ಪಕ್ಷ ಎಂದರೆ, ಅದು ಭಾರತೀಯ ಜನತಾ ಪಕ್ಷ ಮಾತ್ರ. ತಮಿಳು ಉಳಿಯಬೇಕಾದರೆ ಹಿಂದುತ್ವ ಗೆಲ್ಲಬೇಕು. ಕನ್ನಡ ಗೆಲ್ಲಬೇಕಾದರೆ, ಹಿಂದುತ್ವ ಗೆಲ್ಲಬೇಕು ಎಂದು ಹೇಳಿದರು.

error: Content is protected !!