ಫೆ.23 ರಂದು ಮಡಿಕೇರಿಯಲ್ಲಿ ಪಿ.ಸಿ.ಸೊರ್ಕಾರ್ ಸಂಸ್ಮರಣೆ ಹಾಗೂ ಜಾದೂ ಪ್ರದರ್ಶನ

February 22, 2021

ಮಡಿಕೇರಿ ಫೆ.22 : ಪದ್ಮಶ್ರೀ ಪಿ.ಸಿ.ಸೊರ್ಕಾರ್ ಅವರ ಜನ್ಮದಿನ ಫೆಬ್ರವರಿ, 23 ನ್ನು ರಾಷ್ಟ್ರೀಯ ಜಾದೂಗಾರರ ದಿನಾಚರಣೆಯನ್ನಾಗಿ ಭಾರತಾದ್ಯಂತ ಆಚರಿಸಲಾಗುತ್ತಿದ್ದು, ಈ ಪ್ರಯುಕ್ತ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಜಾದೂಗಾರರ ದಿನಾಚರಣೆಯನ್ನು ಆಚರಿಸುತ್ತಿದ್ದು, ಕೊಡಗಿನಲ್ಲಿ ಹಲವಾರು ವರ್ಷಗಳಿಂದ ಜಾದೂಗಾರನಾಗಿ ಹೆಸರು ಮಾಡಿರುವ ವಿಕ್ರಮ್ ಜಾದೂಗಾರ ವಿಕ್ರಮ್ಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾಜಿಕ್ ಅಂಡ್ ಅಲೈಡ್ ಆಟ್ರ್ಸ್ ಸಂಸ್ಥೆಯ ಅಡಿಯಲ್ಲಿ ಪಿ.ಸಿ.ಸೊರ್ಕಾರ್ ಸಂಸ್ಮರಣೆ ಹಾಗೂ ಜಾದೂ ಪ್ರದರ್ಶನ ವಿಶೇಷ ಕಾರ್ಯಕ್ರಮವು ಮಡಿಕೇರಿಯ ಪುರಭವನ(ನಗರಸಭೆ)ದಲ್ಲಿ ಫೆಬ್ರವರಿ, 23 ರಂದು ಸಂಜೆ 6.30 ಗಂಟೆಗೆ ನಡೆಯಲಿದೆ.
ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಮೂಡಾ ಅಧ್ಯಕ್ಷರಾದ ರಮೇಶ್ ಹೊಳ್ಳ, ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ.ರವೀಂದ್ರ ರೈ, ಬಂಟ್ಸ್ ಸಂಘದ ಗೌರವ ಅಧ್ಯಕ್ಷರಾದ ಬಿ.ಬಿ.ಐತಪ್ಪ ರೈ ಇತರರು ಪಾಲ್ಗೊಳ್ಳಲಿದ್ದಾರೆ.
ವಿಶೇಷ ಆಕರ್ಷಣೆಯಾಗಿ ಬೆಂಗಳೂರಿನ ಸುಪ್ರಸಿದ್ಧ ಜಾದೂಗಾರ, ದೇಶ-ವಿದೇಶಗಳಲ್ಲಿ ಪ್ರಖ್ಯಾತಿ ಪಡೆದ ಮ್ಯಾಜಿಕ್ ಚಾನ್ ಖ್ಯಾತಿಯ ಪ್ರೊ.ಚಂದ್ರಶೇಖರ್, ಕಾಮಿಡಿ ಜಾದೂಗಾರನಾಗಿ ಪ್ರಖ್ಯಾತಿ ಹೊಂದಿರುವ ಜಾದೂಗಾರ ರಾವ್ ಬದ್ರಿನಾಥ್ ಕಾರ್ಯಕ್ರಮ ನೀಡಲಿದ್ದಾರೆ. ಕಾರ್ಯಕ್ರಮವು ಶುಲ್ಕರಹಿತವಾಗಿರುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.

error: Content is protected !!