ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಕುರುಂಭ ಭಗವತಿ ವಾರ್ಷಿಕ ಮಾಹೋತ್ಸವ

February 22, 2021

ವಿರಾಜಪೇಟೆ ಫೆ.22 : ಕೊಡಂಗಲ್ಲೂರು ಅಮ್ಮ ಎಂದು ಪ್ರಖ್ಯಾತಳಾದ ಶ್ರೀ ಕುರುಂಭ ಭಗವತಿ ದೇವಿಯ ವಾರ್ಷಿಕ ಮಾಹೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು.

ಮುಂಜಾನೆ ಗಣಪತಿ ಹೋಮದೊಂದಿಗೆ ಪ್ರಾರಂಭವಾಗಿ ಉಷಾಪೂಜೆ, ಪೂರ್ವಹ್ನ ಶ್ರೀ ದೇವಿಗೆ ಮಾಹಾಪೂಜೆ ಜರುಗಿತು.
ವಾರ್ಷಿಕ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಶ್ರೀ ದೇವಿಯ ದರ್ಶನವು ನಡೆಯಿತು. ಸಂಜೆ ಆಯುಧ ಪೂಜೆ ನೆರವೇರಿತು.
ದೇವಿ ಸ್ತುತಿಯಾದ ಭರಣಿ ಪಾಟ್‍ನ್ನು ದೇವಾಲಯದ ಪ್ರಧಾನ ಅರ್ಚಕ ಶಿವದಾಸ್ ವೆಳಿಚ್ಚಾಪಡ್ ಸೇರಿದಂತೆ ಭಕ್ತರು ಹಾಡಿದರು.
ಸಂಜೆ ತಾಲಪೊಲಿ ಕಾರ್ಯಕ್ರಮದ ನಂತರ ದೇವಿ ದರ್ಶನ, ದೀಪಾರಾಧನೆಗಳು ನಡೆದವು.

ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ಎರಡು ದಿನಗಳ ಕಾಲ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

error: Content is protected !!