ತುಳಸಿ ಬೀಜದಿಂದ ಅತ್ಯುತ್ತಮವಾದ ಆರೋಗ್ಯದ ಲಾಭಗಳು

February 22, 2021

ತುಳಸಿ ಬೀಜಗಳ ಪ್ರಭಾವದಿಂದ ಕೆಟ್ಟ ಆರೋಗ್ಯ ಪರಿಸ್ಥಿತಿ ದೂರವಾಗಿ ಅತ್ಯುತ್ತಮವಾದ ಆರೋಗ್ಯದ ಲಾಭಗಳು ಸಿಗುತ್ತವೆ.

ತಲೆ ಕೂದಲಿನಿಂದ ಹಿಡಿದು ಕಾಲಿನ ಪಾದಗಳ ಚರ್ಮದವರೆಗೂ ಒಂದಿಲ್ಲೊಂದು ರೀತಿಯಲ್ಲಿ ತುಳಸಿ ಬೀಜಗಳು ಸಹಾಯಕ್ಕೆ ಬರುತ್ತವೆ.

ನಮ್ಮ ದೇಹದಲ್ಲಿ ವಿಷಕಾರಿ ಅಂಶಗಳನ್ನು ದೂರ ಮಾಡಲು ಮತ್ತು ಕರುಳಿನ ಚಲನೆಯನ್ನು ಉತ್ತಮ ಪಡಿಸಲು ತುಳಸಿ ಬೀಜಗಳು ಸಹಾಯಮಾಡುತ್ತವೆ.
ನಮ್ಮ ದೇಹಕ್ಕೆ ತುಳಸಿ ಬೀಜಗಳನ್ನು ಮತ್ತು ಅವುಗಳ ಒಳ್ಳೆಯ ಅತ್ಯುತ್ತಮ ಪ್ರಭಾವಗಳನ್ನು ಸೇರ್ಪಡಿಸಲು ಒಂದು ಲೋಟ ಹಾಲಿನ ಜೊತೆಗೆ ರಾತ್ರಿ ಮಲಗುವ ಸಮಯದಲ್ಲಿ ಒಂದೆರಡು ದಿನಗಳು ಸೇವನೆ ಮಾಡಿದರೆ ಸಾಕಾಗುತ್ತದೆ.
ತುಳಸಿ ಬೀಜಗಳಲ್ಲಿ ತುಳಸಿ ಎಣ್ಣೆ ಔಷಧಿಯ ರೂಪದಲ್ಲಿದ್ದು ಹೊಟ್ಟೆ ಭಾಗದಲ್ಲಿ ಕಂಡುಬರುವ ಗ್ಯಾಸ್ಟಿಕ್ ಸಮಸ್ಯೆಯನ್ನು ಸುಲಭವಾಗಿ ಹೋಗಲಾಡಿಸುತ್ತದೆ. ನಾರಿನ ಅಂಶ ಕೂಡ ಹೆಚ್ಚಾಗಿ ಇದರಲ್ಲಿ ಕಂಡುಬರುವುದರಿಂದ ಮಲಬದ್ಧತೆ, ಭೇದಿ ಮತ್ತು ಆಮಶಂಕೆ ಸಮಸ್ಯೆಗಳು ದೂರವಾಗುತ್ತವೆ.

ತುಳಸಿ ಬೀಜಗಳಲ್ಲಿ ನಾರಿನ ಅಂಶ ಹೆಚ್ಚಾಗಿರುವುದು ಇದಕ್ಕೆ ಒಂದು ಕಾರಣ. ಇದರ ಜೊತೆಗೆ ಆಲ್ಫಾ ಲಿನೊಲಿಕ್ ಆಮ್ಲ ಮತ್ತು ಒಮೆಗಾ 3 ಫ್ಯಾಟಿ ಆಸಿಡ್ ಅಂಶಗಳು ಇರುವ ಕಾರಣ ದೇಹದಲ್ಲಿ ಕೊಬ್ಬಿನ ಅಂಶವನ್ನು ಕರಗಿಸಿ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಹೆಚ್ಚು ಮಾಡುತ್ತದೆ.

ತುಳಸಿ ಬೀಜಗಳಲ್ಲಿ ಗಿಡಮೂಲಿಕೆ ಔಷಧಿಗಳು ಹೆಚ್ಚಾಗಿ ಕಂಡುಬರುತ್ತವೆ. ಇವು ಶತಮಾನಗಳಿಂದ ಆಗಿನ ಆಯುರ್ವೇದ ಪಂಡಿತರು ಬಳಸುತ್ತಿದ್ದ ಹಾಗೆ ಸಾಮಾನ್ಯ ಶೀತ ಕೆಮ್ಮು ಮತ್ತು ಅಸ್ತಮಾ ಸಮಸ್ಯೆಯನ್ನು ದೂರಮಾಡುವ ಗುಣಲಕ್ಷಣಗಳನ್ನು ಪಡೆದಿವೆ.
ತುಳಸಿ ಬೀಜಗಳಲ್ಲಿ ಆಂಟಿಸ್ಪಾಸ್ಮೊಡಿಕ್ ಲಕ್ಷಣಗಳು ಕಂಡು ಬರುವ ಕಾರಣ ಚಳಿಗಾಲದ ಪ್ರಭಾವದಿಂದ ಉಂಟಾಗುವ ಇಂತಹ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತವೆ.

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕರಗಿಸುವಲ್ಲಿ ಹೆಚ್ಚಿನ ಪಾತ್ರ ಬೀರುತ್ತದೆ.
ಇದಕ್ಕಾಗಿ ನೀವು ರಾತ್ರಿ ಮಲಗುವ ಸಮಯದಲ್ಲಿ ಒಂದು ಟೇಬಲ್ ಚಮಚ ತುಳಸಿ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ನೆನೆ ಹಾಕಿ ಇಡೀ ರಾತ್ರಿ ಹಾಗೆ ಬಿಟ್ಟು, ಬೆಳಗಿನ ಸಮಯದಲ್ಲಿ ಒಂದು ಲೋಟ ಹಾಲಿಗೆ ಇವುಗಳನ್ನು ಹಾಕಿ ಸೇವನೆ ಮಾಡಿ.
ಬೆಳಗಿನ ಉಪಹಾರ ಸೇವನೆ ಮಾಡಿದ ನಂತರ ತುಳಸಿ ಬೀಜಗಳನ್ನು ಮಿಶ್ರಣ ಮಾಡಿದ ಹಾಲನ್ನು ಕುಡಿಯುವುದು ಒಳ್ಳೆಯದು. ಪ್ರತಿದಿನ ಇದನ್ನು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಾಗುತ್ತದೆ.

ತುಳಸಿ ಬೀಜಗಳಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಮತ್ತು ಫ್ಲೇವನಾಯ್ಡ್ ಅಂಶಗಳು ಇರುವುದರಿಂದ ಚರ್ಮದ ಆರೋಗ್ಯಕ್ಕೆ ಸೂಕ್ತವಾಗುವ ರೀತಿ ಇವುಗಳು ಕೆಲಸ ಮಾಡುತ್ತವೆ. ಚರ್ಮದ ಭಾಗದಲ್ಲಿ ಹೊಸ ಜೀವಕೋಶಗಳು ಅಭಿವೃದ್ಧಿ ಆಗುವಂತೆ ನೋಡಿಕೊಳ್ಳುತ್ತದೆ.
ಒಂದು ವೇಳೆ ನಿಮ್ಮ ಚರ್ಮದ ಭಾಗದಲ್ಲಿ ಇಸುಬು, ಸೋರಿಯಾಸಿಸ್ ಮತ್ತು ಇನ್ನಿತರ ಚರ್ಮದ ಸೋಂಕುಗಳು ಕಂಡುಬಂದಿದ್ದರೆ, ನೀವು ತುಳಸಿ ಬೀಜಗಳನ್ನು ಸ್ವಲ್ಪ ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಸೋಂಕು ಇರುವ ಭಾಗದಲ್ಲಿ ಹಚ್ಚಬಹುದು. ನಿರಂತರವಾಗಿ 15 ದಿನಗಳು ಹೀಗೆ ಮಾಡುವುದರಿಂದ ಅತ್ಯುತ್ತಮ ಪರಿಹಾರ ನಿಮ್ಮದಾಗಲಿದೆ.

ತುಳಸಿ ಬೀಜಗಳಲ್ಲಿ ತಂಪು ಗುಣ ಲಕ್ಷಣಗಳು ಹೆಚ್ಚಾಗಿವೆ. ಹಾಗಾಗಿ ಬೇಸಿಗೆಗಾಲದಲ್ಲಿ ನಮ್ಮ ದೇಹದ ಉಷ್ಣಾಂಶವನ್ನು ಕಡಿಮೆ ಮಾಡುವ ಜೊತೆಗೆ ನಮ್ಮ ಹೊಟ್ಟೆಯ ಕೆಲವು ಆರೋಗ್ಯದ ಅಸ್ವಸ್ಥತೆಗಳನ್ನು ದೂರ ಮಾಡುವ ಲಕ್ಷಣಗಳನ್ನು ಪಡೆದಿವೆ.

ತುಳಸಿ ಬೀಜಗಳಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಇರುವ ಕಾರಣ, ನಮ್ಮ ತಲೆಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಚಿಕ್ಕ ವಯಸ್ಸಿಗೆ ಕೂದಲು ಬೆಳ್ಳಗಾಗುವುದನ್ನು ತಪ್ಪಿಸಿ ನೆತ್ತಿಯ ಭಾಗದಲ್ಲಿ ಕಂಡುಬರುವ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ನಿವಾರಣೆ ಮಾಡುತ್ತಾ ತಲೆಕೂದಲು ಉದುರುವಿಕೆ ಸಮಸ್ಯೆಯನ್ನು ದೂರಮಾಡುತ್ತದೆ.
ನೆಲ್ಲಿಕಾಯಿ ಮತ್ತು ತುಳಸಿ ಬೀಜಗಳ ಪುಡಿಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಹಾಕಿ ಪೇಸ್ಟ್ ತಯಾರು ಮಾಡಿ ತಲೆಯ ನೆತ್ತಿ ಭಾಗದಲ್ಲಿ ಹಚ್ಚಿ. ಇದರಿಂದ ಕೂದಲು ಉದುರುವಿಕೆ ಸಮಸ್ಯೆ ದೂರವಾಗುತ್ತದೆ.

ತುಳಸಿ ಬೀಜಗಳಲ್ಲಿ anti-inflammatory ಏಜೆಂಟ್ ಗಳು ಇರುವ ಕಾರಣ ನಮ್ಮ ಮೈಕೈನೋವು, ಚರ್ಮದ ಮೇಲಿನ ಕೆರೆತ ಮತ್ತು ಚರ್ಮದ ಭಾಗದಲ್ಲಿ ಕಂಡುಬರುವ ಊತ ಅತ್ಯುತ್ತಮವಾಗಿ ನಿವಾರಣೆ ಆಗುವಂತೆ ಕೆಲಸ ಮಾಡುತ್ತದೆ.
ಆಯುರ್ವೇದ ಪದ್ಧತಿಯ ಪ್ರಕಾರ ಆರ್ಥ್ರೈಟಿಸ್ ಮತ್ತು ಇನ್ನಿತರ ಸಮಸ್ಯೆಗಳಿಗೂ ಸಹ ತುಳಸಿ ಬೀಜಗಳಿಂದ ಪರಿಹಾರ ಸಿಗುತ್ತದೆ.

ತುಳಸಿ ಬೀಜಗಳಲ್ಲಿ ನಮ್ಮ ಮನಸ್ಸಿನ ಒತ್ತಡವನ್ನು ಮತ್ತು ಆತಂಕವನ್ನು ದೂರ ಮಾಡುವ ಗುಣವಿದೆ. ಮನುಷ್ಯನಿಗೆ ಮಾನಸಿಕ ಒತ್ತಡ ಹೆಚ್ಚಾದಷ್ಟು ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ.
ಹಾಗಾಗಿ ಮೊಟ್ಟ ಮೊದಲನೆಯದಾಗಿ ಮಾನಸಿಕ ಆತಂಕವನ್ನು ನಿವಾರಣೆ ಮಾಡಿಕೊಳ್ಳಲು ಒಂದು ಟೀ ಚಮಚ ತುಳಸಿ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ಪಾನೀಯವನ್ನು ತಯಾರಿ ಮಾಡಿ ಕುಡಿಯುವುದರಿಂದ, ನಿಮ್ಮ ಮಾನಸಿಕ ಆತಂಕ ದೂರ ಆಗುವುದರ ಜೊತೆಗೆ ನಿಮ್ಮ ಅರಿವಿನ ಸಾಮರ್ಥ್ಯ ಹೆಚ್ಚಾಗಿ ಮಾನಸಿಕ ಒತ್ತಡ ಹೆಚ್ಚು ಮಾಡುವಂತಹ ಹಾರ್ಮೋನುಗಳ ಮಟ್ಟ ಕುಸಿಯುವಂತೆ ಮಾಡುತ್ತದೆ.

ತುಳಸಿ ಬೀಜಗಳಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಇರುವ ಕಾರಣ ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಮತ್ತು ಫ್ರೀ ರಾಡಿಕಲ್ ಗಳ ಹಾನಿಯನ್ನು ತಪ್ಪಿಸುವಲ್ಲಿ ಇದು ನೆರವಿಗೆ ಬರುತ್ತದೆ.
ನಿಮ್ಮ ದೇಹದಲ್ಲಿ ಮುಂಬರುವ ದಿನಗಳಲ್ಲಿ ಎಂದಿಗೂ ಕ್ಯಾನ್ಸರ್ ಸಮಸ್ಯೆ ಉಂಟಾಗದಂತೆ ಇದರಿಂದ ನೋಡಿಕೊಳ್ಳಬಹುದು.

error: Content is protected !!