ಕೊಡಗಿನಲ್ಲಿ ಅಕಾಲಿಕ ಮಳೆಗೆ ಕೊಚ್ಚಿ ಹೋದ ಕಾಫಿ ಫಸಲು

February 22, 2021

ಮಡಿಕೇರಿ ಫೆ.22 : ಅಕಾಲಿಕ ಮಳೆಯಿಂದ ಕೊಡಗಿನ ಕಾಫಿ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಇಂದು ಸುರಿದ ಧಾರಾಕಾರ ಮಳೆಗೆ ಮಡಿಕೇರಿ ತಾಲ್ಲೂಕಿನ ಬಿಳಿಗೇರಿ ಗ್ರಾಮದಲ್ಲಿ ಕಾಫಿ ಫಸಲು ಕೊಚ್ಚಿ ಹೋಗಿದೆ. ಕೊಯ್ಲು ಮಾಡಿ ಒಣಗಲು ಹಾಕಿದ್ದ ರಾಶಿ ರಾಶಿ ಕಾಫಿ ಭಾರೀ ಮಳೆಯ ಕಾರಣ ಕೊಚ್ಚಿ ಹೋಗಿದ್ದು, ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಇತರ ಭಾಗಗಳಲ್ಲೂ ಕಳೆದ ಮೂರು ದಿನಗಳಿಂದ ಇದೇ ಪರಿಸ್ಥಿತಿ ಕಂಡು ಬಂದಿದ್ದು, ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ.

error: Content is protected !!