ಒಂಟಿ ಮಹಿಳೆಯ ಹತ್ಯೆ : ಕೆ. ನಿಡುಗಣೆ ಗ್ರಾಮದಲ್ಲಿ ಘಟನೆ

February 23, 2021

ಮಡಿಕೇರಿ ಫೆ. 21 : ಯಾರೋ ದುಷ್ಕರ್ಮಿಗಳು ಒಂಟಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಕೆ. ನಿಡುಗಣೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದಿವಂಗತ ಬೈಲಾಡಿ ಹೊನ್ನಪ್ಪನವರ ಪತ್ನಿ ಲಲಿತ (70) ಮೃತ ದುರ್ದೈವಿ.

ಸ್ನಾನದ ಕೋಣೆಯಲ್ಲಿ ಇವರನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. ಮೇಲ್ನೋಟಕ್ಕೆ ಇದು ಕಳ್ಳತನ ಮಾಡಲು ಬಂದಂತಹ ವ್ಯಕ್ತಿ ಕೊಲೆ ಮಾಡಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಮನೆಯಲ್ಲಿ ಇದ್ದ ಕಪಾಟು ಪೆಟ್ಟಿಗೆಗಳು ತೆರೆದಿದೆ, ವಸ್ತುಗಳ ಚೆಲ್ಲಾಪಿಲ್ಲಿಯಾಗಿವೆ. ಒಬ್ಬ ಮಹಿಳೆ ಈ ಮನೆಯಲ್ಲಿ ವಾಸಿಸುತ್ತಿದ್ದು, ಮೃತರ ಮಕ್ಕಳು ಹೊರಗಡೆ ಉದ್ಯೋಗದಲ್ಲಿದ್ದಾರೆ.

ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.

error: Content is protected !!