ಕೊಡಗು ಮಹಿಳಾ ಫುಟ್ಬಾಲ್ ‌ತಂಡಕ್ಕೆ 20 ಮಂದಿ ಆಯ್ಕೆ

February 23, 2021

ಮಡಿಕೇರಿ ಫೆ. 21 : ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ವತಿಯಿಂದ ಇತ್ತೀಚೆಗೆ ಅಮ್ಮತ್ತಿಯಲ್ಲಿ ಜಿಲ್ಲಾ ಮಹಿಳಾ ಫುಟ್ಬಾಲ್ ತಂಡಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಒಟ್ಟು 20 ಮಂದಿ ಆಯ್ಕೆಯಾಗಿದ್ದಾರೆ ಎಂದು ಮಹಿಳಾ ತಂಡದ ವ್ಯವಸ್ಥಾಪಕರಾದ ಬಿ.ಎ‌ ದೇಚಮ್ಮ ತಿಳಿಸಿದ್ದಾರೆ.

ಆಯ್ಕೆ ಪ್ರಕ್ರಿಯೆಯಲ್ಲಿ 45ಕ್ಕೂ ಹೆಚ್ಚು ಮಹಿಳಾ ಆಟಗಾರರು ಪಾಲ್ಗೊಂಡಿದ್ದರು. ಅಂತಿಮವಾಗಿ 20 ಮಂದಿ ಮಹಿಳಾ ಆಟಗಾರರು ಆಯ್ಕೆಯಾಗಿದ್ದಾರೆ. ಹೆಚ್.ಎಸ್ ಭವಾನಿ,‌ಎಂ.ಡಿ ಕಾವ್ಯಶ್ರೀ, ಬಿ.ಆರ್ ಸ್ನೇಹ, ಬಿ.ಎಂ ಪುಣ್ಯ, ಜೆ.ಆರ್ ನೇತ್ರ, ಆರ್.ಆರ್ ರಾಜೇಶ್ವರಿ, ಎಂ.ವಿ ನಂದಿನಿ, ಜೆ.ಜೆ ಡಯಾನ, ಕೆ.ಬಿ ಶಾಲಿನಿ, ಆರ್.ಗೀತಾ,ಪಿ.ಜೆ ಜೋಹ್ನ, ಬಿ.ಕೆ ಚೈತ್ರ, ಮಾ‌ನಸ ಜೋಯಪ್ಪ, ಕೆ.ಎಂ ರಕ್ಷಿತಾ,ಬಿ.ವಿ ಸುಶ್ಮಿತಾ, ಲೂನಿ ಗಣಪತಿ, ಪಿ ಪರಿಮಳ, ಜೆ.ಆರ್ ಪವಿತ್ರ, ಬಿ.ಎಸ್ ಡಿಂಪಲ್ ಹಾಗೂ ಎಂ.ಯು ವಿದ್ಯಶ್ರೀ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಮಹಿಳಾ ತಂಡದ ವ್ಯವಸ್ಥಾಪಕರಾದ ಬಿ.ಎ ದೇಚಮ್ಮ ತಿಳಿಸಿದ್ದಾರೆ.

error: Content is protected !!