ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಖಿ ಮಹಿಳಾ ಘಟಕ ಉದ್ಘಾಟನೆ

February 23, 2021

ಮಡಿಕೇರಿ ಫೆ. 21 : ಸಾವಿರಾರು ಹೆಣ್ಣು ಮಕ್ಕಳನ್ನು ಗರ್ಭದಲ್ಲೇ ಹತ್ಯೆ ಮಾಡಲಾಗುತ್ತಿದೆ ಹಾಗೂ ಹೆಣ್ಣು ಮಕ್ಕಳ ಜನನದ ನಂತರ ಅವರನ್ನು ಕೊಲ್ಲಲಾಗುತ್ತಿರುವುದು ಸಮಾಜಕ್ಕೆ ದೊಡ್ಡ ಆಘಾತದ ವಿಷಯವಾಗಿದೆ ಎಂದು ವಿರಾಜಪೇಟೆ ಮಾಜಿ ಪ.ಪಂ ಅಧ್ಯಕ್ಷರಾದ ದೇಚಮ್ಮ ಬೇಸರ ವ್ಯಕ್ತಪಡಿಸಿದರು.

ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಆಂತರಿಕ ಭರವಸಾ ಕೋಶ ಇವರ ಸಂಯುಕ್ತಾಶ್ರಯದಲ್ಲಿ ಮಹಿಳಾ ಘಟಕ-ಸಖಿ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರಿಗೆ ತಮ್ಮ ಜೀವನವನ್ನು ಮುಕ್ತವಾಗಿ ಜೀವಿಸಲು ಅಧಿಕಾರವಿದೆ. ಮಹಿಳಾ ಸಬಲೀಕರಣವು ಮಹಿಳೆಯರಿಗೆ ಬದುಕುವ ಹಕ್ಕನ್ನು ನೀಡುತ್ತಿದೆ. ಆದರೆ ಹೆಣ್ಣು ಮಕ್ಕಳು ಇಂದು ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಿರುವುದು ಬೇಸರ ವಿಷಯವಾಗಿದೆ ಎಂದರು.
ಹೆಣ್ಣು ಶಿಶು ಹತ್ಯೆ, ಮತ್ತು ಭ್ರೂಣ ಹತ್ಯೆಯನ್ನು ಮಾಡುವುದು ಶಿಕ್ಷಾರ್ಹವಾಗಿದೆ. ಆದರೆ ಕಾನೂನಿನ‌ ಕಣ್ಣು ತಪ್ಪಿಸಿ ಗರ್ಭದಲ್ಲೇ ಹೆಣ್ಣು ಶಿಶು ಹತ್ಯೆಯನ್ನು ಮಾಡಲಾಗುತ್ತಿರವುದು ಸಮಾಜಕ್ಕೆ ದೊಡ್ಡ ಆಘಾತವಾಗಿದೆ.
ಮಹಿಳೆಯರಿಗೆ ಶಿಕ್ಷಣ ,ವೃತ್ತಿಪರ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳನ್ನು ನೀಡಬೇಕಾಗಿದೆ.
ವಿದ್ಯಾರ್ಥಿನಿಯರು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಮುನ್ನಡೆಯಬೇಕೆಂದು ದೇಚಮ್ಮ ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾದ ಸುನಿತಾ ವಹಿಸಿದ್ದರು.
ಈ ಸಂದರ್ಭ ಕಾರ್ಯಕ್ರಮದ ಸಂಚಾಲಕರು ಹಾಗೂ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶೃತಿ ಪಾರ್ವತಿ, ದೈಹಿಕ ಶಿಕ್ಷಣ ನಿರ್ದೇಶಕರಾದ ರಾಕಿ ಪೂವಣ್ಣ, ವಿರಾಜಪೇಟೆ ನಗರ ಪೊಲೀಸ್ ಅಧಿಕಾರಿ ಕಾವೇರಮ್ಮ , ಬೇಟೊಳಿ ಗ್ರಾ.ಪಂ ಮಾಜಿ ಅಧ್ಯಕ್ಷರಾದ ಚೊಂದಮ್ಮ ಹಾಗೂ ವಿವಿಧ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.

error: Content is protected !!