ಚಿಕ್ಕಬಳ್ಳಾಪುರ ಜಿಲೆಟಿನ್‌ ಸ್ಪೋಟ ಪ್ರಕರಣ : ಸಿಐಡಿಗೆ ವಹಿಸಲು‌ ಸಚಿವ ಬಸವರಾಜ್‌ ಬೊಮ್ಮಯಿ ಸೂಚನೆ

February 23, 2021

ಚಿಕ್ಕಬಳ್ಳಾಪುರ: ಕಲ್ಲು ಗಣಿಗಾರಿಕೆ ಬಗ್ಗೆ ಪ್ರತಿ ತಿಂಗಳು ಎಸ್‌ಪಿಗೆ ವರದಿ ನೀಡಲು ತಿಳಿಸಿದ್ದೇನೆ. ಸರಕಾರದಿಂದ ಮೃತರ ಕುಟುಂಬದವರಿಗೆ ತಲಾ ಐದು ಲಕ್ಷ ಪರಿಹಾರ ನೀಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಅಕ್ರಮ ಗಣಿಗಾರಿಕೆ ಬಗ್ಗೆ ಮೊದಲು‌ ಮೂರು ತಿಂಗಳಿಗೊಮ್ಮೆ ಪರಿಶೀಲನೆ ಮಾಡ್ತಿದ್ದರು. ಈ ಘಟನೆ ಬಳಿಕ ಪ್ರತಿ ತಿಂಗಳು ಕ್ರಶರ್ ಗಳ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇಡೀ ಸ್ಫೋಟ ಪ್ರಕರಣದಲ್ಲಿ ಅಧಿಕಾರಿಗಳ ಪಾತ್ರದ ಕುರಿತು ಸಿಐಡಿ ತನಿಖೆಗೆ ಒಪ್ಪಿಸಲಾಗುವುದು ಎಂದು ತಿಳಿಸಿದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ ಬಳಿಕ ಈ ಸಂಬಂಧ ಹೇಳಿಕೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್‌ ಹೋಬಳಿಯ ಹಿರೇನಾಗವೇಲಿ ಗ್ರಾಮದ ಬಳಿ ಇರುವ ಕ್ವಾರಿಯಲ್ಲಿ ಜಿಲೆಟಿನ್‌ನಿಂದ ಸ್ಪೋಟ ಸಂಭವಿಸಿದೆ.

ಘಟನೆಯಲ್ಲಿ ಐದು ಮಂದಿ ಸಾವನಪ್ಪಿದ್ದು,ಮೂರು ಜನರು ಗಂಭೀರ ಗಾಯಗೊಂಡಿದ್ದಾರೆ. ಕ್ವಾರೆ ಮೇಲೆ ದಾಳಿ ನಡೆಯುವ ಭಯದಿಂದ ಸೋಮವಾರ ತಡರಾತ್ರಿ ಕ್ವಾರಿಯಲ್ಲಿದ್ದ ಜಿಲೆಟಿನ್‌ಗಳನ್ನು ಟಾಟಾ ಏಸ್‌ ವಾಹನದ ಮೂಲಕ ಸಾಗಿಸಲು ಮುಂದಾದಾಗ ಅವಘಡ ಸಂಭವಿಸಿದೆ.

error: Content is protected !!