ದಕ್ಷಿಣ ಕೊಡಗಿನಲ್ಲಿ 18 ರಿಂದ 20 ಹುಲಿಗಳಿವೆ : ಟಾಟುಮೊಣ್ಣಪ್ಪ ಅಸಮಾಧಾನ

February 23, 2021

ಮಡಿಕೇರಿ ಫೆ.23 : ನಿಟ್ಟೂರು, ನಾಲ್ಕೇರಿ, ಬಿರುನಾಣಿ, ಸಿದ್ದಾಪುರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುಮಾರು 18 ರಿಂದ 20 ಹುಲಿಗಳು ಸಂಚರಿಸುತ್ತಿದ್ದು, ಕೊಡಗನ್ನು ಹುಲಿಧಾಮ ಮಾಡಲು ಹೊರಟಂತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟುಮೊಣ್ಣಪ್ಪ ಮಡಿಕೇರಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಲಿಗಳ ದಾಳಿಯಿಂದ ಆಗುತ್ತಿರುವ ಅನಾಹುತಗಳಿಗೆ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಂಸದರು ಹಾಗೂ ಶಾಸಕರುಗಳೇ ನೇರ ಹೊಣೆ ಎಂದು ಆರೋಪಿಸಿದರು.
ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವಿದ್ದಾಗ ಅಂದಿನ ಅರಣ್ಯ ಸಚಿವ ರಮಾನಾಥ ರೈ ಅವರು ಕಾಡಾನೆಗಳ ದಾಳಿ ತಡೆಗೆ ರೈಲು ಕಂಬಿಗಳ ಬೇಲಿಯನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿ ಶೇ.80ರಷ್ಟು ಕಾಮಗಾರಿ ಪೂರ್ಣಗೊಳಿಸಿದ್ದರು. ಆದರೆ ನಂತರ ಬಂದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಉಳಿದಿರುವ ಕಾಮಗಾರಿಯನ್ನು ಇನ್ನೂ ಕೂಡ ಪೂರ್ಣಗೊಳಿಸಲು ಸಾದ್ಯವಾಗಿಲ್ಲವೆಂದು ಟೀಕಿಸಿದರು.
ರೈಲುಕಂಬಿಯ ಬೇಲಿ ನಿರ್ಮಾಣದಿಂದ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಬಂದಿದೆ ಎಂದರು.