ಮಾಯಮುಡಿಯಲ್ಲಿ ಎಂ.ಬಿ.ಪಿ.ಎಲ್. ಕ್ರಿಕೆಟ್ ಕಪ್ : ಧನಲಕ್ಷ್ಮಿ ಕ್ರಿಕೆಟರ‍್ಸ್ ಚಾಂಪಿಯನ್

February 23, 2021

ಮಾಯಮುಡಿ: ಫೆ.23: ಗೋಣಿಕೊಪ್ಪಲು ಸಮೀಪದ ಮಾಯಮುಡಿ-ಬೆಮ್ಮತ್ತಿ ಯೂತ್ ಕ್ಲಬ್ ತಂಡದ ಆಶ್ರಯದಲ್ಲಿ ಮಾಯಮುಡಿಯ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ‘ಮಾಯಮುಡಿ-ಬೆಮ್ಮತ್ತಿ ಪ್ರೀಮಿಯರ್ ಲೀಗ್'(ಎಂ. ಬಿ. ಪಿ. ಎಲ್.)ಕಪ್ ಅನ್ನು ಬಾಳೆಲೆಯ ಧನಲಕ್ಷ್ಮಿ ಕ್ರಿಕೆಟರ‍್ಸ್ ತಂಡ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಗೆದ್ದುಕೊಂಡಿದೆ.

3 ದಿನಗಳ ಕಾಲ ನಡೆದ ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿದ ಮಾಯಮುಡಿಯ ಕಲ್ಪಡ ವಾರಿಯರ್ಸ್ ಅಂತಿಮವಾಗಿ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಯಮುಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ಉದ್ಯಮಿಗಳಾದ ಸಣ್ಣುವಂಡ ಸುರೇಶ್ (ದೊಡ್ಡಮಾಡ್), ಸ್ಥಳೀಯ ಗ್ರಾ.ಪಂ ಸದಸ್ಯ ಚೆಪ್ಪುಡಿರ ಪ್ರದೀಪ್, ಮಾಯಮುಡಿ ಕೋಲುಬಾಣೆ ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸುಧೀರ್ ವಿಜೇತ ತಂಡಗಳಿಗೆ ನಗದು ಬಹುಮಾನ, ಟ್ರೋಫಿ ಮತ್ತು ವೈಯಕ್ತಿಕ ಪಾರಿತೋಷಕಗಳನ್ನು ವಿತರಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು), ರೈತ ಸಂಘದ ಮುಖಂಡ ಪುಚ್ಚಿಮಾಡ ರಾಯಿ, ಮಾಯಮುಡಿ ಗ್ರಾ.ಪಂ ಸದಸ್ಯ ಟಾಟು ಪೊಣ್ಣಪ್ಪ, ಜಿ.ಪಂ ಸದಸ್ಯ ಬಿ.ಎನ್. ಪ್ರಥ್ವಿ, ಪಂದ್ಯಾವಳಿಯ ಪ್ರಾಯೋಜಕ ಸಿ.ಎಂ. ಅಬೂಬಕ್ಕರ್, ಟಿ.ವೈ.ಉಮರ್ ಮತ್ತಿತರರು ಪಾಲ್ಗೊಂಡಿದ್ದರು.

ಪಂದ್ಯಾವಳಿಯ ಆಯೋಜಕ ವಿನೀಶ್ ಮಾಯಮುಡಿ, ರಾಫಿ ಬೆಮ್ಮತ್ತಿ, ಉಮ್ಮರ್ ಸೇರಿದಂತೆ, ಮಾಯಮುಡಿ -ಬೆಮ್ಮತ್ತಿ ಯೂಥ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

error: Content is protected !!