ದೊಡ್ಡಕೊಡ್ಲಿ ಸರಕಾರಿ ಹಿರಿಯ ಪ್ರಥಾಮಿಕ ಶಾಲೆಯಲ್ಲಿ ಗ್ರಾ.ಪಂ ಸದಸ್ಯರುಗಳಿಗೆ ಸನ್ಮಾನ

February 23, 2021

ಕೊಡ್ಲಿಪೇಟೆ : ಸಮೀಪದ ದೊಡ್ಡಕೊಡ್ಲಿ ಸರಕಾರಿ ಹಿರಿಯ ಪ್ರಥಾಮಿಕ ಶಾಲೆಯ ಎಸ್.ಡಿ.ಎಂ.ಸಿ.ಸದಸ್ಯರುಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಶಾಲಾ ವ್ಯಾಪ್ತಿಗೆ ಸೇರುವ ವಾರ್ಡ್ ಗಳಿಂದ ಚುನಾಯಿತರಾಗಿರುವ ಗ್ರಾ.ಪಂ.ಸದಸ್ಯರುಗಳನ್ನು ಇದೇ ಸಂದರ್ಭ ಶಾಲಾಭಿವೃದ್ಧಿ ಸಮಿತಿ , ಪೋಷಕರು ಹಾಗೂ ಶಿಕ್ಷಕರ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮತ್ತು ಜಿಲ್ಲಾ ಸಮನ್ವಯ ವೇದಿಕೆಯ ಅಧ್ಯಕ್ಷ ಕೆ.ಎ. ನಾಗೇಶ್ ವಹಿಸಿದರು.

ಗ್ರಾ.ಪಂ.ಅದ್ಯಕ್ಷ ಕೆ‌.ಆರ್.ಚಂದ್ರಶೇಖರ್ ತರಬೇತಿಯನ್ನು ಉದ್ಘಾಟಿಸಿದರು.

ಶಾಲೆಯ ಮುಖ್ಯೊಪಾದ್ಯಯರು ಶಿಕ್ಷಕರ ಸಂಘದ ಜಿಲ್ಲಾದ್ಯಕ್ಷ ಹೆಚ್.ಎನ್ . ಮಂಜುನಾಥ್ ಹಾಗೂ ಕೊಡ್ಲಿಪೇಟೆ ಕ್ಲಸ್ಟರ್ ನ ಸಿ.ಆರ್.ಪಿ .ಸುರೇಶ್ ತರಬೇತಿ ನಿಡಿದರು. ಸಹ ಶಿಕ್ಷಕ ಫಯಾಜ್ ಪ್ರಸ್ತಾವಿಕ ನುಡಿಗಳನ್ನಾಡಿದರು.

ಗ್ರಾ.ಪಂ.ಅದ್ಯಕ್ಷ ಕೆ.ಆರ್.ಚಂದ್ರಶೇಖರ್ ಹಾಗೂ ಉಪಾದ್ಯಕ್ಷ ರಾದ ಗೀತಾ ತ್ಯಾಗರಾಜ್ ಸದಸ್ಯರುಗಳಾದ ಪ್ರಸನ್ನ.ಡಿ‌.ಕೆ , ಶೋಬಿತ್ ಗೌಡ , ಯಶೋದಾ ಧರ್ಮಪ್ಪ , ನಗೀನಾಭಾನು , ಮುತ್ತಯ್ಯ , ಕವಿತಾ ಗಂಗಾದರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು .

ಶಿಕ್ಷಕರಾದ ಮೂರ್ತಿ ಕೆ‌.ಎಲ್ , ಚ್ಯೆತ್ರ ನವಮಿ , ಲತಾ‌ .ಆಶಾ . ಉರ್ದು ಶಾಲೆಯ ಮುಜಮ್ಮಿಲ್ , ಎಸ್.ಡಿ‌.ಎಂ‌.ಸಿ ಉಪಾಧ್ಯಕ್ಷರಾದ ತಬಸ್ಸುಬ್ , ಸದಸ್ಯರುಗಳಾದ ನಾಗೇಶ್ ಕೆ‌.ಎಸ್ , ರಮ್ಲತ್ , ಹಸೀನಾ, ರಸೀನಾ , ವಸಂತ, ಇಸ್ಮಾಯಿಲ್ , ಶೇಖರ್ ಮತ್ತು ಪೋಷಕರುಗಳು ಸಾರ್ವಜನಿಕರು ಹಾಜರಿದ್ದರು.

error: Content is protected !!