ಅರೆಭಾಷೆ ಸಂಸ್ಕೃತಿ ತರಬೇತಿ ಶಿಬಿರ : ಎಲ್ಲಾ ಪದ್ದತಿಗಳಿಗೂ ವೈಜ್ಞಾನಿಕ ಹಿನ್ನೆಲೆಯಿದೆ : ಲಕ್ಷ್ಮೀನಾರಾಯಣ ಕಜೆಗದ್ದೆ

February 23, 2021

ಮಡಿಕೇರಿ ಫೆ.23 : ನಾವು ಆಚರಿಸುವ ಎಲ್ಲಾ ಪದ್ದಗಳಿಗೂ ಅದರದ್ದೇ ಆದ ವೈಜ್ಞಾನಿಕ ಹಿನ್ನೆಲೆಯಿದ್ದು, ಇದರ ಮಹತ್ವವನ್ನು ಇಂದಿನ ಯುವಜನತೆಗೆ ಅರ್ಥೈಸುವ ಕಾರ್ಯವಾಗಬೇಕಾಗಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ತಿಳಿಸಿದ್ದಾರೆ.
ನಗರದ ಕೊಡಗು ಗೌಡ ಮಹಿಳಾ ಒಕ್ಕೂಟದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯುತ್ತಿರುವ 7 ದಿನಗಳ ಅರೆಭಾಷೆ ಸಂಸ್ಕøತಿ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲಾ ಪದ್ದತಿಗಳಿಗೂ ವೈಜ್ಞಾನಿಕ ಹಿನ್ನಲೆ ಇರುತ್ತದೆ, ಆದರೆ ಅವುಗಳ ಅರಿವು ಈಗಿನ ಜನತೆಯಲ್ಲಿ ಇಲ್ಲ. ಯುವ ಜನತೆಗೆÉ ಸಂಸ್ಕøತಿಯ ಶಿಕ್ಷಣ ಸಿಗಬೇಕಾಗಿದೆ ಎಂದರು.
ಶಿಬಿರ ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕಿ ಹಾಗೂ ಗೌಡ ಸಮಾಜದ ಪ್ರಮುಖರಾದ ಅಂಬೆಕಲ್ಲು ಸುಶೀಲ ಕುಶಾಲಪ್ಪ ಪ್ರತಿಯೊಂದು ಸಂಸ್ಕøತಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಆದರೆ ಪ್ರಸ್ತುತ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕøತಿಗಳಿಗೆ ಯುವ ಜನತೆ ಮಾರು ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸ್ಥಳೀಯ ಸಂಸ್ಕøತಿಯ ಅರಿವನ್ನು ಮೂಡಿಸುವ ತರಬೇತಿಗಳು ಹೆಚ್ಚು ನಡೆಯಬೇಕು ಎಂದರು.
ಯುವಜನರಲ್ಲಿ ಸಂಸ್ಕøತಿಯ ಆಚಾರ ವಿಚಾರಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಲಿದೆ ಅವರಿಗೆ ಹಿರಿಯರ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ನುಡಿದರು.
ಆಧುನಿಕತೆಯೊಂದಿಗೆ ಸಂಸ್ಕøತಿಯ ಪಾಲನೆಯು ಬಹು ಮುಖ್ಯವಾಗಿದೆ ಹಾಗೂ ಪ್ರತಿಯೊಂದು ಸಂಸ್ಕøತಿಯೂ ಅದರದೇ ಆದ ಮಹತ್ವವನ್ನು ಹೊಂದಿದ್ದು, ಅವುಗಳಿಗೆ ಪುರಾಣದ ಅರ್ಥವಿರುತ್ತದೆ. ಇವುಗಳನ್ನು ಅರಿತುಕೊಂಡು ಹೋದಲ್ಲಿ ಮಾತ್ರ ನಮ್ಮ ಸಂಸ್ಕøತಿಯನ್ನು ಉಳಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಪಾಶ್ಚಾತ್ಯ ಸಂಸ್ಕøತಿಗಳು ನಮ್ಮ ಸಂಸ್ಕøತಿಯೊಂದಿಗೆ ವಿಲೀನವಾಗುವ ಅವಕಾಶಗಳು ಹೆಚ್ಚಾಗಿರುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ತಂಗಮ್ಮ ಸೋಮಣ್ಣ, ಲಲಿತ ಅಯ್ಯಣ್ಣ, ಇತರರು ಇದ್ದರು. ಆಶಾ ಕಣ್ಣೆರಾ ಸ್ವಾಗತಿಸಿದರು. ಪ್ರಿಯಾ ವಸಂತ್ ಪ್ರಾರ್ಥಿಸಿದರು.