ಫೆ.27 ರಂದು ಕೊಡಗು ಬಿಜೆಪಿ ಸಾಮಾಜಿಕ ಜಾಲತಾಣದ ಕಾರ್ಯಾಗಾರ

February 23, 2021

ಮಡಿಕೇರಿ ಫೆ.23 : ಕೊಡಗು ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಜಿಲ್ಲಾ ಮಟ್ಟದ ಕಾರ್ಯಾಗಾರ ಫೆ.27 ರಂದು ಮಡಿಕೇರಿಯ ಕಾಫಿ ಕೃಪಾ ಕಟ್ಟಡದಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ಕನ್ನಿಗಂಡ. ಬಿ.ಪೊನ್ನಪ್ಪ (ದಿನೇಶ್) ತಿಳಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಕ್ತಾರರು, ಸಂಘಟನಾ ಕಾರ್ಯದರ್ಶಿಗಳು, ಪ್ರಬಾರಿಗಳು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಪದಾಧಿಕಾರಿಗಳು, ಮಡಿಕೇರಿ ಗ್ರಾಮಾಂತರ ಮಂಡಲ, ಸೋಮವಾರಪೇಟೆ ಮಂಡಲ, ವಿರಾಜಪೇಟೆ ಮಂಡಲ, ಮಡಿಕೇರಿ ನಗರದ ಸಾಮಾಜಿಕ ಜಾಲತಾಣದ ಸಂಚಾಲಕರು, ಸಹ ಸಂಚಾಲಕರು ಹಾಗೂ ಪದಾಧಿಕಾರಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿರುವರು.

error: Content is protected !!