ಮನೆಗೆ ನುಗ್ಗಿ ಚಿನ್ನಾಭರಣ, ನಗದು ಲೂಟಿ : ಚೋರರ ಪತ್ತೆಗೆ ಬಲೆ ಬೀಸಿದ ಕುಶಾಲನಗರ ಪೊಲೀಸರು

February 23, 2021

ಕುಶಾಲನಗರ ಫೆ.23 : ಯಾರೂ ಇಲ್ಲದ ಮನೆಯೊಳಗೆ ನುಗ್ಗಿದ ಚೋರರು ಚಿನ್ನಾಭರಣ, ನಗದು ಮತ್ತು ಒಂದು ಲ್ಯಾಪ್ ಟಾಪ್ ನ್ನು ದೋಚಿದ ಪ್ರಕರಣ ಕುಶಾಲನಗರದ ನಗರದ 3 ನೇ ಬ್ಲಾಕ್ ನ ಆದರ್ಶ ದ್ರಾವಿಡ ಕಾಲೋನಿಯಲ್ಲಿ ನಡೆದಿದೆ.
ಲೋಕೇಶ್ ಎಂಬುವವರಿಗೆ ಸೇರಿದ ಮನೆಗೆ ಲಗ್ಗೆ ಇಟ್ಟ ಕಳ್ಳರು ಹಿಂಬಾಗಿಲನ್ನು ಹಾರೆಕೋಲಿನಿಂದ ತೆಗೆದಿದ್ದಾರೆ. ಮನೆಯೆಲ್ಲಾ ಜಾಲಾಡಿ ಸುಮಾರು 20 ಗ್ರಾಂ ಚಿನ್ನಾಭರಣ, 80 ಸಾವಿರ ರೂ. ನಗದು ಮತ್ತು ಒಂದು ಲ್ಯಾಪ್ ಟಾಪ್ ನ್ನು ಕದ್ದೊಯ್ದಿದ್ದಾರೆ. ವಿವಾಹ ಸಮಾರಂಭಕ್ಕೆಂದು ಪರ ಊರಿಗೆ ಹೋಗಿದ್ದ ಮನೆಯವರು ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.
ಕುಶಾಲನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಠಾಣಾಧಿಕಾರಿ ಗಣೇಶ್, ಸಿಬ್ಬಂದಿಗಳು ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದರು.
ಜೋರಾಗಿ ಮಳೆ ಸುರಿಯುತ್ತಿದ್ದ ಸಂದರ್ಭವನ್ನೇ ಬಂಡಾವಾಳ ಮಾಡಿಕೊಂಡ ಚೋರರು ಮನೆಗೆ ನುಗ್ಗಿದ್ದಾರೆ ಎಂದು ಶಂಕಿಸಲಾಗಿದೆ.

error: Content is protected !!