ತುಮಕೂರು ಜಿಲ್ಲೆಯನ್ನು ಬರ ಮುಕ್ತವನ್ನಾಗಿ ಮಾಡುವುದು ನನ್ನ ಮುಖ್ಯ ಗುರಿ: ಸಚಿವ ಜೆ.ಸಿ ಮಾಧುಸ್ವಾಮಿ

February 24, 2021

ಮಧುಗಿರಿ: ಆಡಳಿತವೇ ಶ್ರೇಷ್ಠ ಎನ್ನುವ ಕಾಲ ಮುಗಿದಿದೆ, ಈಗ ಅಭಿವೃದ್ಧಿಯೇ ಶ್ರೇಷ್ಠ, ಗಾಂಧೀಜಿಯವರು ಸ್ವತಂತ್ರ್ಯ ಅಪೇಕ್ಷೆ ಪಟ್ಟಿದ್ದು ಪ್ರತಿ ವ್ಯಕ್ತಿಯ ಶ್ರೇಯಸ್ಸಿಗೆ ಎಂದು ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.

ಕೊಡಿಗೇನಹಳ್ಳಿ ಹೋಬಳಿಯ ಮುದ್ದೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು, ಆರೋಗ್ಯ ಇಲಾಖೆಯ ಸೇವೆ ದೇವರ ಸೇವೆ ಎಂದು ಭಾವಿಸಬೇಕು. ಮೋದಿಯವರು ಅಟಲ್ ಭೋಜಲ್ ಜಿಲ್ಲೆಯ ಯೋಜನೆಯಡಿ ಜಿಲ್ಲೆಗೆ 1208 ಕೋಟಿ ಅನುದಾನ ನೀಡಿದ್ದು ತಾಲೂಕುಗಳಲ್ಲಿ ಅನುಷ್ಠಾನ ಮಾಡಲಿದ್ದೇವೆ, ಮಧುಗಿರಿ ತಾಲೂಕಿನ ದೊಡ್ಡ ಗ್ರಾಮವನ್ನು ಆಯ್ಕೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.

error: Content is protected !!