ಫೆ. 26 ರಿಂದ ಮಾ. 5ರ ವರೆಗೆ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್

February 24, 2021

ಮಡಿಕೇರಿ ಫೆ. 24 : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಫೆ. 26 ರಿಂದ ಮಾ. 5ರ ವರೆಗೆ ವಿವಿಧ ಧಾರ್ಮಿಕ ಪ್ರವಚನ, ದ್ಸಿಕ್ರ್ ಹಲ್ಬಾ, ಖತಂ ದುಆ, ದುಆ ಮಜ್ಲಿಸ್ ನೊಂದಿಗೆ ವಿಜ್ರಂಭಣೆಯಿಂದ ನಡೆಯಲಿದೆ.
ಫೆ. 26 ರಂದು ಎಮ್ಮೆಮಾಡು ಟಿಐಎಂಜೆ ಅಧ್ಯಕ್ಷ ಕೆ.ಎಸ್. ಅಬ್ದುಲ್ ಖಾದರ್ ಹಾಜಿ ಧ್ವಜಾರೋಣದ ಮೂಲಕ ಚಾಲನೆ ನೀಡಲಿದ್ದು, ಕೊಯಕೋಡ್‍ನ ಸಯ್ಯಿದ್ ಮುಹಮ್ಮದ್ ಕೊಯ ತಂಙಳ್ ಜಮಲುಲ್ಲೈಲಿ ಉರೂಸ್ ಉದ್ಘಾಟಿಸಲಿದ್ದಾರೆ.
ವೇದಿಕೆಯಲ್ಲಿ ಎಮ್ಮೆಮಾಡಿದ ಸಯ್ಯಿದ್ ಕೊಯಮ್ಮ ತಂಙಳ್, ಅಬ್ದುಲ್ಲ ಫೈಝಿ ಎಡಪ್ಪಲ, ಸಿ.ಎಂ. ಅಬ್ದುಲ್ಲ ಖಾದರ್, ಅಬ್ದುಲ್ಲ ಖಾದರ್ ಹಾಜಿ ಕಾಳೇರ ಪಾಲ್ಗೊಳ್ಳಲಿದ್ದಾರೆ.
ರಾತ್ರಿ 8 ಗಂಟೆಗೆ ಮತ ಪ್ರವಚನ ನಡೆಯಲಿದ್ದು, ಪೇರೋಡ್ ಮುಹಮ್ಮದ್ ಅಝ್ಹರಿ “ದೂರುವಾಗುತ್ತಿರುವ ಸಂಬಂಧ” ಎಂಬ ವಿಷಯ ಮಂಡನೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪಡಿಯಾನಿ ಖತೀಬ ನಿಝಾರ್ ಖುತುಬಿ ಅಲ್ ಹಾದಿ, ಎಮ್ಮೆಮಾಡು ಟಿಐಎಂಜಿ ಸದಸ್ಯ ಪಕೋಯ ತಂಙಳ್ ಅಲ್ ಹೈದರೂಸಿ, ಪ್ರಮುಖರಾದ ಸಯ್ಯಿದ್ ಫಝಲ್ ಆಲ್ ಹೈದರೂಸಿ, ಅಬ್ದುಲ್ ಖಾದರ್ ಸಆದಿ ಕೆ.ಎಂ ಭಾಗವಹಿಸಲಿದ್ದಾರೆ.
ಫೆ. 27 ರಂದು ಸಯ್ಯಿದ್ ಸುಹೈಲ್ ಅಸ್ಸಖಾನ್ ಮಡಕ್ಕೆರ ಅವರ ನೇತೃತ್ವದಲ್ಲಿ ದಿಕ್ರ್ ಹಲ್ಖ ನಡೆಯಲಿದ್ದು, ಮಂಗಳೂರಿನ ಹಾಫಿಳ್ ಸುಫ್ಯಾನ್ ಸಖಾಫಿ ” ಧಾರಿತಪ್ಪುತ್ತಿರುವ ಮುಸ್ಲಿಂ” ಎಂಬ ವಿಷಯದ ಕುರಿತು ಮತ ಪ್ರವಚನ ಮಾಡಲಿದ್ದಾರೆ.
ಫೆ. 28 ರಂದು ಸಯ್ಯಿದ್ ಮುಹಮ್ಮದ್ ಮದನಿ ಆಲ್ ಬುಖಾರಿ ಮೊಗ್ರಾಲ್ ನೇತೃತ್ವದಲ್ಲಿ ಆಧಿತ್ಯವಾರ ಖತಂ ದುಆ ಮಗ್ರಿಬ್ ನಡೆಯಲಿದ್ದು, ರಾತ್ರಿ 8 ಗಂಟೆಗೆ ಎಮ್ಮೆಮಾಡಿನ ಖತೀಬ ಹಾಫಿಳ್ ಫಳ್ಲುರ್ರಹ್ಮಾನ್ ಸಖಾಫಿ “ಎಮ್ಮೆಮಾಡು ಭರವಸೆಯ ತೀರ” ಎಂಬ ವಿಷಯದ ಕುರಿತು ಮತ ಪ್ರವಚನ ಮಾಡಲಿದ್ದಾರೆ.
ಮಾ. 1 ರಂದು ಮಧ್ಯಾಹ್ನ 12 ಗಂಟೆಗೆ ಕಾಸರಗೋಡಿನ ಜಾಮಿಆ ಸೆಆದಿಯ್ಯ ಅಧ್ಯಕ್ಷ ಸಯ್ಯಿದ್ ಆಟಕೊಯ ತಂಙಳ್ ಕುಂಬೋಲ್ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು, ಸಮ್ಮೇಳನವನ್ನು ಕಾಂತಪುರಂ ನ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.
ಮುಖ್ಯ ಭಾಷಣಕಾರರಾಗಿ ಕರ್ನಾಟಕ ಮುಸ್ಲಿಂ ಜಮಾಅತ್‍ನ ಪ್ರಧಾನ ಕಾರ್ಯದರ್ಶಿ ಮೌಲಾನ ಶಾಫಿ ಸಾಅದಿ ಪಾಲ್ಗೊಳ್ಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೊಡಗು ಉಸ್ತುವಾರಿ ಸಚಿವ ವಿ. ಸೋಮಣ್ಣ, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಯಾಕುಬ್, ಕೊಡಗು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಬಿ ಗಣೇಶ್ ಸೇರಿದಂತೆ ಜಿ.ಪಂ ಸದಸ್ಯರು ಭಾಗವಹಿಸಲಿದ್ದಾರೆ.
ರಾತ್ರಿ 8 ಗಂಟೆಗೆ ಕೀಚೇರಿ ಅಬ್ದುಲ್ ಗಫೂರ್ ಮೌಲವಿ “ಅವಗಣಿಸಲ್ಪಡುವ ಆಧ್ಯಾತ್ಮಿಕತೆ” ಎಂಬ ವಿಷಯದ ಕುರಿತು ಮತ ಪ್ರವಚನ ಮಾಡಲಿದ್ದಾರೆ.
ಮಾ. 2 ರಂದು ರಾತ್ರಿ 8 ಗಂಟೆಗೆ ಅಬ್ದುಲ್ ಲತೀಫ್ ಸಆದಿ ಪಯಶ್ಮಿ ” ದಾರಿ ತಪ್ಪುತ್ತಿರುವ ಮಹಿಳೆಯರು ಎಂಬ ವಿಷಯದ ಕುರಿತು ಪ್ರವಚನ ಮಾಡಲಿದ್ದು, ಮಾ 3ರಂದು ಬೆಳಿಗ್ಗೆ ಖುರ್ರತುಸ್ಸಾದಾತ್ ಸಯ್ಯಿದ್ ಫಝರ್ ಕೊಯಮ್ಮ ತಂಙಳ್ ನೇತೃತ್ವದಲ್ಲಿ ದುಆ ಮಜ್ಲಿಸ್ ನಡೆಯಲಿದೆ.
ರಾತ್ರಿ 8 ಗಂಟೆಗೆ ಅಬ್ದುಲ್ ಆಝೀಝ್ ಆಶ್ರಫಿ ” ಖಬ್‍ರ್ ಜೀವನ” ಎಂಬ ವಿಚಾರದ ಕುರಿತು ವಿಷು ಮಂಡಣೆ ಮಾಡಲಿದ್ದಾರೆ.
ಮಾ. 4 ರಂದು ಮಗ್ರಿಬ್ ಬಳಿಕ ಎಮ್ಮೆಮಾಡು ಖತೀಬ ಹಾಫಿಳ್ ಫಳ್ಲುರ್ರಹ್ಮಾನ್ ಸಖಾಫಿ ನೇತೃತ್ವದಲ್ಲಿ ಸ್ವಲಾತುನ್ನಾರಿಯ ಮಜ್ಲಿಸ್ ನಡೆಯಲಿದ್ದು, ರಾತ್ರಿ 8 ಗಂಟೆಗೆ ಡಾ. ಮುಹಮ್ಮದ್ ಫಾರೂಖ್ ನಈಮಿ ಕೊಲ್ಲಂ ” ಲಹರಿ ಮತ್ತು ಲೆಕ್ಕಚಾರ ಮನುಷ್ಯ ಕುಲಕ್ಕೆ ಆಪತ್ತು” ಎಂಬ ವಿಚಾರದ ಕುರಿತು ವಿಷು ಮಂಡಣೆ ಮಾಡಲಿದ್ದಾರೆ.
ಕೊನೆಯ ದಿನವಾದ ಮಾ. 5 ರಂದು ಜುಮಾ ನಮಾಝ್ ಬಳಿಕ ಸಮಾರೋಪ ಸಮ್ಮೇಳನ ನಡೆಯಲಿದ್ದು, ಸಮ್ಮೇಳನವನ್ನು ಅಲ್ ಹಾಜ್ ಇ.ಕೆ. ಮಹ್ಮೂದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.
ಮುಖ್ಯ ಪ್ರಭಾಷಣಕಾರರಾಗಿ ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹಿಂ ಖಲೀಲ್ ಆಲ್ ಬುಖಾರಿ, ಕಡಲುಂಡಿ ಭಾಗವಹಿಸಲಿದ್ದಾರೆ.

error: Content is protected !!