ಸಮರ್ಥ ಕನ್ನಡಿಗರು ಸಂಸ್ಥೆಯಿಂದ ಮಾ. 14 ರಂದು ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ವಿವಿಧ ಸ್ಪಧೆ೯

February 25, 2021

ಮಡಿಕೇರಿ, ಫೆ.25 : ಸಮಥ೯ ಕನ್ನಡಿಗರು ಸಂಸ್ಥೆ ವತಿಯಿಂದ ಮಾ. 14 ರಂದು ನಗರದ ಓಂಕಾರ್ ಸದನದಲ್ಲಿ “ನಿಮ್ಮ ಪ್ತತಿಭೆ- ನಮ್ಮ ವೇದಿಕೆ” ಎಂಬ ಹೆಸರಿನಲ್ಲಿ ವಿವಿಧ ಸ್ಪರ್ಧೆ ಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮಿ ತಿಳಿಸಿದ್ದಾರೆ..

ಸ್ಪರ್ಧೆಯ ವಿವರಗಳು :

ಐದು ವರ್ಷದ ಒಳಗಿನ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ

1-5 ನೇ ತರಗತಿಯ ಮಕ್ಕಳಿಗೆ ಕತೆ ಹೇಳುವ ಸ್ಪರ್ಧೆ ಏರ್ಪಡಿಸಲಾಗಿದ್ದು, ಎರಡು ನಿಮಿಷ ಕಾಲಾವಕಾಶ ನೀಡಲಾಗುವುದು.

5-7 ನೇ ತರಗತಿಯ ಮಕ್ಕಳಿಗೆ ಜಾನಪದ ಗೀತಗಾಯನ ಸ್ಪರ್ಧೆ ಏರ್ಪಡಿಸಲಾಗಿದ್ದು, ಸಮೂಹದಲ್ಲಿ
ತಂಡದಲ್ಲಿ ಕನಿಷ್ಠ 4 ಗರಿಷ್ಟ 6 ಸ್ಪರ್ಧಿಗಳು ಇರಬೇಕು. 3 ನಿಮಿಷ ಕಾಲಾವಕಾಶ ನೀಡಲಾಗುವುದು.

8-10 ನೇ ತರಗತಿಯ ಮಕ್ಕಳಿಗೆ ಕೋಲಾಟ ಸ್ಪರ್ಧೆ ಏರ್ಪಡಿಸಲಾಗಿದ್ದು, ಕನಿಷ್ಠ 6 ಗರಿಷ್ಟ 8 ಸ್ಪರ್ಧಿಗಳು ಇರಬೇಕು. 4 ನಿಮಿಷಗಳ ಕಾಲಾವಕಾಶ ನೀಡಲಾಗುವುದು.


ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು, ಒಂದು ಗಂಟೆ ಕಾಲಾವಕಾಶ ನೀಡಲಾಗುವುದು.

ಪದವಿ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದ್ದು, ಕೋಲಾಟ ಮಾಡುವಂತಿಲ್ಲ. ಸಮೂಹದಲ್ಲಿ ಕನಿಷ್ಠ 6 ಗರಿಷ್ಟ 8 ಸ್ಪರ್ಧಿಗಳು ಇರಬೇಕು. 4 ನಿಮಿಷಗಳ ಕಾಲಾವಕಾಶ ನೀಡಲಾಗುವುದು.

ಮಹಿಳೆಯರಿಗೆ ಭಾವಗೀತೆ ಮತ್ತು ಸಮೂಹ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದ್ದು, ಕನಿಷ್ಠ 6 ಗರಿಷ್ಟ 8 ಸ್ಪರ್ಧಿಗಳು ಇರಬೇಕು, 4 ನಿಮಿಷಗಳ ಕಾಲಾವಕಾಶ, ಕನ್ನಡ ಹಾಡುಗಳ ಆಯ್ಕೆ ಕಡ್ಡಾಯ.

ಹೆಸರು ನೋಂದಾವಣೆಗೆ ಮಾ. 5 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ ಅನುಷಾ ರಾಘವೇಂದ್ರ – 9844906143, ಕೃಪಾ ಮುದ್ದಪ್ಪ – 7892557646, ಪ್ರೀತಾ ಕೃಷ್ಣ – 9632976833, ಶಾಂತ – 9482108135 ಸಂಪರ್ಕಿಸಬಹುದಾಗಿದೆ.

error: Content is protected !!