ಕುಂಬೂರು ಶಾಲೆಯಲ್ಲಿ ವಿಶೇಷ ಚೇತನ ವಿದ್ಯಾರ್ಥಿಗೆ ವೀಲ್ ಚೇರ್ ಹಸ್ತಾಂತರ

February 25, 2021

ಮಡಿಕೇರಿ ಫೆ. 25 : ಸೋಮವಾರಪೇಟೆ ತಾಲ್ಲೂಕಿನ ಕುಂಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಶೇಷ ಚೇತನ ವಿದ್ಯಾರ್ಥಿಗೆ ವೀಲ್ ಚೇರ್ ಅನ್ನು ಕೊಡುಗೆಯಾಗಿ ನೀಡಲಾಯಿತು.
ವಿಶೇಷ ಚೇತನ ವಿದ್ಯಾರ್ಥಿ ಕೆ.ಎಸ್. ಭಾರದ್ವಾಜ್ ಗೆ ಮಾದಾಪುರ ಗ್ರಾಮದ ಪೊಲೀಸ್ ಇಲಾಖೆಯ ಸಂತೋಷ್ (ಬಸವರಾಜ್), ಗ್ರಾ.ಪಂ ಸದಸ್ಯೆ ದಮಯಂತಿ(ಪುಷ್ಪ) ಅವರ ಮೂಲಕ ವೀಲ್ ಚೇರ್ ಹಸ್ತಾಂತರಿಸಿದರು.
ಈ ಸಂದರ್ಭ ಗ್ರಾ.ಪಂ.ಸದಸ್ಯ ಜರ್ಮಿ, ತಾಲೂಕಿನ ಐಆರ್‍ಟಿಇ ರತ್ನಮ್ಮ, ಶಾಲಾ ಮುಖ್ಯೋಪಾಧ್ಯಾಯ ಎಂ.ಬಿ.ರಾಜಣ್ಣ, ಶಾಲಾ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಸದಸ್ಯರು ಮತ್ತು ಪೋಷಕರು ಹಾಜರಿದ್ದರು.

error: Content is protected !!