ಎಮ್ಮೆಮಾಡು ಮಖಾಂ ಉರೂಸ್ ಸರಳ ರೀತಿಯಲ್ಲಿ ಆಚರಿಸಲು ನಿರ್ಧಾರ

February 25, 2021

ಮಡಿಕೇರಿ ಫೆ.25 : ಇದೇ ಫೆ.26 ರಿಂದ ಮಾ.5 ರವರೆಗೆ ಆಯೋಜಿತವಾಗಿದ್ದ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ನ್ನು ಈ ಬಾರಿ ಸರಳ ರೀತಿಯಲ್ಲಿ ಆಚರಿಸಲು ಇಲ್ಲಿನ ಆಡಳಿತ ಮಂಡಳಿ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸಮಿತಿಯ ಪ್ರಮುಖರು ಕೊಡಗಿನ ಅಕ್ಕಪಕ್ಕದ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಕೋವಿಡ್ ನಿಯಮ ಪಾಲನೆಯನ್ನು ಕಡ್ಡಾಯಗೊಳಿಸಿರುವುದರಿಂದ ಸಂಪ್ರದಾಯಕ್ಕೆ ಒತ್ತು ನೀಡಿ ಸರಳ ರೀತಿಯಲ್ಲಿ ಉರೂಸ್ ನಡೆಯಲಿದೆ ಎಂದು ತಿಳಿಸಿದರು.
ಹತ್ತು ದಿನಗಳ ಉರೂಸ್ ಕಾರ್ಯಕ್ರಮದಲ್ಲಿ ಯಾವುದೇ ಜನ ಜಂಗುಳಿಗೆ ಅವಕಾಶವಿರುವುದಿಲ್ಲ. ಬರುವ ಭಕ್ತರು ಜಿಲ್ಲಾಡಳಿತದ ಆದೇಶದಂತೆ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಮಾಸ್ಕ್ ಧರಿಸುವುದು ಖಡ್ಡಾಯವೆಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಮಾಅತ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಪ್ರಮುಖರಾದ ಎಂ.ಜಿ.ಜಾಹಿರ್, ಇಬ್ರಾಹಿಂ ಸಹದಿ, ಕೆ.ಎಂ.ಹುಸೈನ್, ಸಖಾಫಿ, ಕಾಳೇರ ಅಬ್ದುಲ್ ಖಾದರ್, ಮಾಹಿನ್ ಹಾಗೂ ಅಶ್ರಫ್ ಉಪಸ್ಥಿತರಿದ್ದರು.

error: Content is protected !!