ಕಾಡಾನೆ ದಾಳಿಗೆ ಯುವಕ ಬಲಿ : ಸಿದ್ದಾಪುರದ ಬಿಟಿಕಾಡಿನಲ್ಲಿ ಘಟನೆ

February 26, 2021

ಮಡಿಕೇರಿ ಫೆ. 26 : ಕಾಡಾನೆ ದಾಳಿಗೆ ಯುವಕನೋರ್ವ ಬಲಿಯಾದ ಘಟನೆ ತಡ ರಾತ್ರಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಬಿಟಿಕಾಡು ಕಾಫಿ ತೋಟದಲ್ಲಿ ನಡೆದಿದೆ.
ಆನಂದಪುರ ನಿವಾಸಿ ಏಳುಮಲೈ ರವರ ಪುತ್ರ ಸಂದೀಪ್ (21) ಮೃತ ದುರ್ದೈವಿ.
(ಬಾಂಬೆ ಬರ್ಮಾ ಟ್ರೇಡಿಂಗ್ ಕಂಪನಿ) ಬಿಬಿಟಿಸಿ ಸಂಸ್ಥೆಗೆ ಸೇರಿದ ಬಿಟಿಕಾಡು ಕಾಫಿ ತೋಟದ ಕಣದಲ್ಲಿ ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಧರ್ಭ ರಾತ್ರಿ 2.30 ವೇಳೆ ಕಾಡಾನೆ ದಾಳಿ ನಡೆಸಿ ತಲೆಯ ಭಾಗಕ್ಕೆ ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಸಂದೀಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಭಾಗದಲ್ಲಿ ಕಾಡಾನೆ ದಾಳಿಗೆ ಇದು ಎರಡನೇ ಬಲಿಯಾಗಿದ್ದು, ಐದಕ್ಕೂ ಹೆಚ್ಚು ಮಂದಿ ಆನೆ ದಾಳಿಗೆ ಒಳಗಾಗಿ ಶಾಶ್ವತ ಅಂಗ ವೈಫಲ್ಯದಿಂದ ಬಳಲುತ್ತಿದ್ದಾರೆ.

error: Content is protected !!