ವಿರಾಜಪೇಟೆಯಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರಿಗೆ ಅಭಿನಂದನೆ ಸಲ್ಲಿಕೆ

ವಿರಾಜಪೇಟೆ, ಫೆ. 26: ಗ್ರಾ.ಪಂ ಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮ ಮತ್ತು ವಲಯ ಅಧ್ಯಕ್ಷರ ಅವಿರತ ಶ್ರಮದಿಂದ ಪಂಚಾಯಿತಿ ಅಧಿಕಾರ ಸ್ಥಾಪಿಸುವಲ್ಲಿ ಪಕ್ಷವು ಸಫಲತೆಯನ್ನು ಕಂಡಿದೆ ಎಂದು ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಅಭಿಪ್ರಯ ವ್ಯಕ್ತಪಡಿಸಿದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಣ್ಣಂಗಾಲ ಚಾಮುಂಡಿ ಪೈಸಾರಿ ಸಮೂದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಗ್ರಾ.ಪಂ ಚುನಾವಣೆಯಲ್ಲಿ ಜಯಗಳಿಸಿದ ಪಕ್ಷ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಕಣ್ಣಂಗಾಲ ಗ್ರಾ.ಪಂ ವ್ಯಾಪ್ತಿಯ ಒಟ್ಟು ಆರು ಸ್ಥಾನಗಳಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಜಯ ಸಾದಿಸಿ ಇಂದು ಗ್ರಾ.ಪಂ ಆಡಳಿತವನ್ನು ಮರು ಸ್ಥಾಪನೆ ಮಾಡಲು ಗ್ರಾಮಸ್ಥರು ಪಕ್ಷದ ಮೇಲೆ ಮತ್ತು ಅಭ್ಯರ್ಥಿಗಳ ಮೇಲಿಟ್ಟರುವ ವಿಶ್ವಾಸವಾಗಿದೆ ಎಂದರು.
ನಂಬಿಕೆಯನ್ನು ಉಳಿಸಿಕೊಂಡು ಗ್ರಾಮದ ಶ್ರೆಯೋಭಿವೃದ್ಧಿಗೆ ಶ್ರಮಿಸಬೇಕು. ಪಕ್ಷದ ಕಾರ್ಯಕರ್ತರನ್ನು ಪಕ್ಷವು ಎಂದಿಗೂ ಗೌರವದಿಂದ ಕಾಣುತ್ತದೆ. ವಲಯದ ಅಧ್ಯಕ್ಷರ ಪರಿಶ್ರಮದಿಂದ ಇಂದು ಗ್ರಾ.ಪಂ ಆರು ಸ್ಥಾನಗಳನ್ನು ಪಡೆದಿದ್ದೇವೆ. ಮತದಾರರ ನಂಬಿಕೆಗೆ ದ್ರೋಹ ಬಗೆಯದೆ ಪಂಚಾಯಿತಿ ಅಭಿವೃದ್ಧಿಗಾಗಿ ಎಲ್ಲಾ ಸದಸ್ಯರು ಸಹಕಾರ ನೀಡುವಂತಾಗಬೇಕು ಎಂದು ಹೇಳಿ ನೂತನವಾಗಿ ಆಯ್ಕೆಗೊಂಡ ಸದಸ್ಯರಿಗೆ ಶುಭಹಾರೈಸಿದರು.
ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕ ಜಿಲ್ಲಾಧ್ಯಕ್ಷ ವಿ.ಕೆ. ಸತೀಶ್ ಕುಮಾರ್ ಮಾತನಾಡಿ, ಪಕ್ಷವು ಜಾತ್ಯಾತೀತ ತತ್ವ ಸಿದ್ದಾಂತಗಳ ಮೇಲೆ ನೆಲೆ ನಿಂತಿದೆ. ಎಲ್ಲಾ ಧರ್ಮ ಮತ್ತು ಜಾತಿ ಜನಾಂಗದ ವ್ಯಕ್ತಿಗಳಿಗೆ ಸರಿಸಮಾನವಾದ ಸ್ಥಾನಮಾನಗಳನ್ನು ನೀಡಿ ಗೌರವಿಸಿದೆ. ಮತದಾರರು ನೀಡಿರುವ ಗೌರವವನ್ನು ಉಳಿಸಿಕೊಂಡು,ಕಾರ್ಯಕರ್ತರ ಶ್ರಮಕ್ಕೆ ಚಿರರುಣಿಯಾಗಿರಬೇಕು. ಪಂಚಾಯಿತಿ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಆಯ್ಕೆಯಾದ ಸದಸ್ಯರಿಗೆ ಶುಭ ಹಾರೈಸಿದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೊಳುಮಂಡ ರಫೀಕ್, ಅಲ್ಪಸಂಖ್ಯಾತ ಘಟಕದ ಪ್ರಮುಖರಾದ ಚೇಕು ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ರಾಜ್ಯ ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ಮತ್ತು ವಲಯ ಕಾಂಗ್ರೆಸಿನ ಅಧ್ಯಕ್ಷ ಕೆ.ಎಸ್. ಗೋಪಾಲಕೃಷ್ಣ ಗ್ರಾಮ ಪಂಚಾಯಿತಿಗೆ ಆಯ್ಕೆಗೊಂಡ ಸದಸ್ಯರಾದ ಟಿ.ವಿ. ಗಣೇಶ್, ವಿ.ಆರ್. ಗ್ರಿಶ್ಮ ರಂಜು, ವಿ.ಪಿ. ಕಲ್ಪೇಶ್. ವಿ.ಪಿ. ಜೀವನ್, ಶ್ರೀಮತಿ ಶಾಂತಿ ಅಯ್ಯಪ್ಪ, ಮತ್ತು ಶ್ರೀಮತಿ ರಜನಿ ಕುಟ್ಟಪ್ಪ ಅವರನ್ನು ಶಾಲು ಹೊದಿಸಿ ಪಕ್ಷದ ವತಿಯಿಂದ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ತುಳಸಿ, ಯುವ ಕಾಂಗ್ರೆಸಿನ ಅಧ್ಯಕ್ಷ ಚಂದ್ರ ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು.
