ವಿಮಾ ಅರ್ಜಿ ತಿರಸ್ಕೃತ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

February 26, 2021

ಮಡಿಕೇರಿ ಫೆ.26 : ನೈಸರ್ಗಿಕ ವಿಕೋಪಗಳು ಅಥವಾ ಕೀಟ ರೋಗಗಳ ಪರಿಣಾಮವಾಗಿ ಯಾವುದೇ ಅಧಿಸೂಚಿತ ಬೆಳೆ ವಿಫಲವಾದಾಗ ರೈತರಿಗೆ ವಿಮಾ ರಕ್ಷಣೆಯನ್ನು ಮತ್ತು ಹಣಕಾಸಿನ ಬೆಂಬಲವನ್ನು ನೀಡುವುದು ಮತ್ತು ರೈತರ ಆದಾಯವನ್ನು ಸ್ಥಿರಗೊಳಿಸುವುದು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ರಾಜ್ಯ ಸರ್ಕಾರವು 2018-19 ರಲ್ಲಿ ಇ-ಆಡಳಿತ ಇಲಾಖೆಯು ಅಭಿವೃದ್ಧಿಪಡಿಸಿದ ಮೊಬೈಲ್ ಆಫ್ ಮುಖಾಂತರ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಪ್ರತಿಯೊಂದು ತಾಕಿನ ಬೆಳೆ ಸಮೀಕ್ಷೆ ಕೈಗೊಳ್ಳಲಾಗಿದೆ. ಬೆಳೆ ವಿಮೆ ಸೇರಿದಂತೆ ಎಲ್ಲಾ ಉದ್ದೇಶಗಳಿಗೆ ಬೆಳೆ ಸಮೀಕ್ಷೆ ಮಾಹಿತಿ ಬಳಸಬೇಕೆಂದು ತಿಳಿಸಲಾಗಿದೆ.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ 2018-19 ರ ಮುಂಗಾರು ಹಂಗಾಮಿನಲ್ಲಿ ಮೊದಲ ಬಾರಿ ಬೆಳೆ ಸಮೀಕ್ಷೆ ದತ್ತಾಂಶಗಳನ್ನು ಬೆಳೆ ನೋಂದಣಿಯಾದ ಪ್ರಸ್ತಾವನೆಗಳೊಂದಿಗೆ ಹೊಲಿಕೆ ಮಾಡಿ ಹಾಗೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಅನುಮೋದನೆಯಾದ ವಿನಾಯಿತಿಗಳನ್ನು ಅಳವಡಿಸಿ ತಾಳೆಯಾದ ಪ್ರಸ್ತಾವನೆಗಳಿಗೆ ಸಂರಕ್ಷಣೆ ತಂತ್ರಾಂಶದಲ್ಲಿ ವಿಮಾ ಪರಿಹಾರ ಲೆಕ್ಕ ಹಾಕಿ ಪಾವತಿ ಮಾಡಲಾಗುತ್ತದೆ.
ತಾಳೆಯಾಗದೇ ಇರುವ ಪ್ರಸ್ತಾವನೆಗಳನ್ನು ವಿಮಾ ಸಂಸ್ಥೆಯವರು ಅಂಗೀಕರಿಸಿರುತ್ತಾರೆ ಅಥವಾ ತಿರಸ್ಕರಿಸಿರುತ್ತಾರೆ. ಈಗ ತಿರಸ್ಕøತವಾದ 76 ಪ್ರಸ್ತಾವನೆಗಳನ್ನು (ಮಡಿಕೇರಿ ತಾಲ್ಲೂಕು-3, ವಿರಾಜಪೇಟೆ ತಾಲ್ಲೂಕು-23, ಸೋಮವಾರಪೇಟೆ ತಾಲ್ಲೂಕು-50) ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರದರ್ಶಿಸಲಾಗಿದೆ. ಈ ಸಂಬಂಧ ಪ್ರಕಟಿಸಿದ 15 ದಿನಗಳೊಳಗೆ ವಿಮಾ ಅರ್ಜಿ ತಿರಸ್ಕøತಗೊಂಡ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ಮರು ಪರಿಶೀಲಿಸಲು ರೈತರು ಆಯಾಯ ತಾಲ್ಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬನಾ ಎಂ.ಷೇಕ್ ಅವರು ತಿಳಿಸಿದ್ದಾರೆ.

error: Content is protected !!