ಫೆ.27 ರಿಂದ ಮಡಿಕೇರಿಯಲ್ಲಿ ಈಜುಕೊಳ ಪುನರ್ ಆರಂಭ

February 26, 2021


ಮಡಿಕೇರಿ ಫೆ.26 : ಕೋವಿಡ್ ನಿಂದಾಗಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳವನ್ನು ಸರ್ಕಾರದ ಆದೇಶದಂತೆ ಮಾರ್ಚ್-2020ರಿಂದ ಮುಚ್ಚಲಾಗಿತ್ತು, ಪ್ರಸ್ತುತ ಸರ್ಕಾರದ ಆದೇಶ ಹಾಗೂ ಕೊಡಗು ಜಿಲ್ಲಾಧಿಕಾರಿಯವರ ಮಾರ್ಗದರ್ಶನದಂತೆ ಫೆಬ್ರವರಿ, 27 ರಿಂದ ಈಜುಕೊಳವನ್ನು ಪುನರ್ ಆರಂಭಿಸಲಾಗುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.
ಈಜುಕೊಳದಲ್ಲಿ ಈಜಲು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ: 08272-228985 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಲು ಕೋರಿದೆ.

error: Content is protected !!