ಏ.1 ರಿಂದ ಮಡಿಕೇರಿಯಲ್ಲಿ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿ

February 26, 2021

ಮಡಿಕೇರಿ ಫೆ.26 : ವೈಲ್ಡ್ ಮಾಸ್ಟರ್ಸ್ ತಂಡದ ವತಿಯಿಂದ ಏ.1 ರಿಂದ 18ರ ವರೆಗೆ ರಾಜ್ಯ ಮಟ್ಟದ ಮುಕ್ತ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯು ಮಡಿಕೇರಿಯಲ್ಲಿ ನಡೆಯಲಿದೆ ಎಂದು ತಂಡದ ಅಧ್ಯಕ್ಷ ರವಿಕಿರಣ್ ರೈ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಕಗಳ ನಂತರ ಮೊಟ್ಟ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಮುಕ್ತ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ವಿಜೇತ ತಂಡಕ್ಕೆ ಪ್ರಥಮ ಬಹುಮಾನ 1 ಲಕ್ಷ ರೂ. ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ.60 ಸಾವಿರ ಮತ್ತು ಆಕರ್ಷಕ ಟ್ರೋಫಿ, ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದ ಎಲ್ಲಾ ಆಟಗಾರಿಗೆ ಶುದ್ಧ ಬೆಳ್ಳಿ ಪದಕವನ್ನು ನೀಡಲಾಗುವುದು ಎಂದರು.
ಪಂದ್ಯಾವಳಿಗೆ ರಾಜ್ಯದ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ಮಾ.20ರ ಒಳಗೆ ರೂ. 10 ಸಾವಿರ ಪ್ರವೇಶ ಶುಲ್ಕ ಪಾವತಿಸಿ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ರವಿಕಿರಣ್-94494 14357, ಕೆ.ಟಿ. ಪ್ರಶಾಂತ್-70228 50339, ಪ್ರಿನ್ಸ್ ಕುಶಾಲಪ್ಪ-86607 23170, ಪಂಚಮ್ ಸೂದನ್-9611101023 ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ತಂಡದ ಪ್ರಮುಖರಾದ ಕೆ.ಟಿ.ಪ್ರಶಾಂತ್, ಪ್ರಿನ್ಸ್ ಕುಶಾಲಪ್ಪ, ಪಂಚಮ್ ಸೂದನ್, ರಿಷೀತ್ ಮಾದಯ್ಯ ಹಾಗೂ ಮುಜೀóಬ್ ಉಪಸ್ಥಿತರಿದ್ದರು.

error: Content is protected !!