ಕಾಡಾನೆ ದಾಳಿ : ಬೀಟಿಕಾಡು ತೋಟದಲ್ಲಿ ಯುವಕ ಸಾವು

February 26, 2021

ಮಡಿಕೇರಿ ಫೆ.26 : ಕಾಫಿ ಕಣದಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿ ಇದ್ದ ಯುವಕನೊಬ್ಬ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಸಿದ್ದಾಪುರ ಬಳಿಯ ಬೀಟಿಕಾಡು ಕಾಫಿ ತೋಟದಲ್ಲಿ ನಡೆದಿದೆ.
ಪಾಲಿಬೆಟ್ಟ ಸಮೀಪದ ಆನಂದಪುರದ ನಿವಾಸಿ ಏಳುಮಲೈ ಎಂಬವರ ಪುತ್ರ ಸಂದೀಪ್ (21) ಎಂಬಾತನೆ ಸಾವನ್ನಪ್ಪಿರುವ ದುರ್ದೈವಿ.
ಬೀಟಿಕಾಡಿನಲ್ಲಿರುವ ಬಾಂಬೆ ಬರ್ಮಾ ಟ್ರೇಡಿಂಗ್ ಕಂಪೆನಿ(ಬಿಬಿಟಿಸಿ)ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದೀಪ್, ಗುರುವಾರ ರಾತ್ರಿ ಪಾಳಿಯ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟು, ಕಾಫಿ ಕಣದಲ್ಲಿ ಕರ್ತವ್ಯದಲ್ಲಿದ್ದ.
ಈ ಸಂದರ್ಭ ಕಾಡಾನೆ ನಡೆಸಿದ ಏಕಾಏಕಿ ದಾಳಿಗೆ ಸಿಲುಕಿ ಸಂದೀಪ್ ಸ್ಥಳದಲ್ಲೆ ಸಾವನ್ನಪ್ಪಿದ್ದು, ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!