ಕಾವೇರಿ ತಮಿಳು ಸಂಘದ ಕ್ರೀಡಾಕೂಟಕ್ಕೆ ಚಾಲನೆ : ಫೆ.28ರಂದು ಸಾಂಸ್ಕೃತಿಕ ಕಾರ್ಯಕ್ರಮ ಸಮಾರಂಭ

February 26, 2021

ಸಿದ್ದಾಪುರ ಫೆ.26 : ಪೊಂಗಲ್ ಹಬ್ಬದ ಪ್ರಯುಕ್ತ ಕಾವೇರಿ ತಮಿಳು ಸಂಘದ ವತಿಯಿಂದ ಅರೆಕಾಡು ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಗೆ ಸಂಘದ ಅಧ್ಯಕ್ಷ ತಿರುಮಲ ರಾಜನ್ ಚಾಲನೆ ನೀಡಿದರು.
ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿಇರುವ ತಮಿಳು ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರತಿವರ್ಷ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಫೆ.28 ರಂದು ತಮಿಳು ಬಾಂಧವರಿಗೆ ವಿವಿಧ ಕ್ರೀಡಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಮಾರೋಪ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ದಾನಿಗಳು, ಸಮಾಜ ಸೇವಕರು, ತಮಿಳು ಸಂಘದ ಮುಖಂಡರುಗಳು ಪಾಲ್ಗೊಳ್ಳಲಿದ್ದಾರೆ.
ತಮಿಳು ಸಂಘದ ಉಪಾಧ್ಯಕ್ಷ ಪಾಲಿಬೆಟ್ಟ ಮೈಕಲ್ ಮಾತನಾಡಿ ಸಂಘ ತುರ್ತು ಸಂದರ್ಭದಲ್ಲಿ ನೆರವಾಗುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಮತ್ತೊಬ್ಬ ಉಪಾಧ್ಯಕ್ಷ ಕಣ್ಣನ್, ಕಾರ್ಯದರ್ಶಿ ಫ್ರಾನ್ಸಿಸ್, ಖಜಾಂಚಿ ತಂಬಿ ಪ್ರಮುಖರಾದ ನಾಗರಾಜ್ ಮತ್ತಿತರರು ಹಾಜರಿದ್ದರು.

error: Content is protected !!