ಕರ್ನಾಟಕ ಜಾನಪದ ಪರಿಷತ್‍ನ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ಕೆ.ಎ. ಪ್ರಕಾಶ್ ಆಯ್ಕೆ

February 27, 2021

ಸೋಮವಾರಪೇಟೆ ಫೆ. 27 : ಕರ್ನಾಟಕ ಜಾನಪದ ಪರಿಷತ್‍ನ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ಕೆ.ಎ. ಪ್ರಕಾಶ್ ಆಯ್ಕೆಯಾಗಿದ್ದಾರೆ.
ಪತ್ರಿಕಾಭವನ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಪರಿಷತ್‍ನ ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಘಟಕದ ಕಾರ್ಯಾಧ್ಯಕ್ಷರಾಗಿ ಎಸ್.ಎ. ಮುರುಳೀಧರ್, ಪ್ರಧಾನ ಕಾರ್ಯದರ್ಶಿಯಾಗಿ ವಿಜಯ್ ಹಾನಗಲ್, ಕಾರ್ಯದರ್ಶಿಯಾಗಿ ಎಂ.ಎ. ರುಬೀನಾ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಎನ್. ದೀಪಕ್, ಅಶ್ವಿನಿ ಕೃಷ್ಣಕಾಂತ್, ಖಜಾಂಚಿಯಾಗಿ ಶರ್ಮಿಳ ರಮೇಶ್, ಉಪಾದ್ಯಕ್ಷರಾಗಿ ಸಂಧ್ಯಾ ಕೃಷ್ಣಪ್ಪ, ಬಿ.ಎಂ. ದಾಮೋಧರ್ ಅವರುಗಳನ್ನು ನೇಮಕಗೊಳಿಸಲಾಯಿತು.
ಉಳಿದಂತೆ ಸಾಂಸ್ಕøತಿಕ ಸಮಿತಿ ಅಧ್ಯಕ್ಷರಾಗಿ ಕೆ.ಪಿ. ಸುದರ್ಶನ್, ಕಾರ್ಯದರ್ಶಿಯಾಗಿ ಸುಮತಿ, ಸಾಹಿತ್ಯ ಸಮಿತಿ ಅಧ್ಯಕ್ಷರಾಗಿ ನ.ಲ. ವಿಜಯ, ಕಾರ್ಯದರ್ಶಿಯಾಗಿ ರಾಣಿ ರವೀಂದ್ರ, ಸೇರಿದಂತೆ ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಅಂಬೇಕಲ್ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಖಜಾಂಚಿ ಸಂಪತ್ ಅವರುಗಳು ಇದ್ದರು.
ಸೋಮವಾರಪೇಟೆ ಜಾನಪದ ಪರಿಷತ್‍ನ ಸಕ್ರಿಯ ಸದಸ್ಯರಾಗಿದ್ದು, ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ ಮೂವರು ಸದಸ್ಯರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ಹಾನಗಲ್ಲು ಗ್ರಾ.ಪಂ.ಗೆ ಆಯ್ಕೆಯಾಗಿರುವ ರೇಣುಕಾ ವೆಂಕಟೇಶ್, ಸುಶೀಲ ಹಾನಗಲ್, ಕೆ.ಪಿ. ಸುದರ್ಶನ್ ಅವರುಗಳನ್ನು ಸನ್ಮಾನಿಸಲಾಯಿತು.

error: Content is protected !!